ಪೈವಳಿಕೆ ಪಂಚಾಯತ್ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಮುಸ್ಲಿಂ ಲೀಗ್ ಸದಸ್ಯೆಯ ಬೆಂಬಲ

ಪೈವಳಿಕೆ: ಇಂದು ನಡೆದ ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ಚಲಾಯಿಸಿದರು. ಇದರೊಂದಿಗೆ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರು ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಡಂಕೋಡಿ ವಾರ್ಡ್‌ನಿಂದ ಗೆದ್ದಿರುವ ಮುಸ್ಲಿಂ ಲೀಗ್ ಸದಸ್ಯೆ ಮೈಮೂನತುಲ್ ಮಿಸ್ರಿಯಾ ಅವರು, ಕುರುಡಪದವು ವಾರ್ಡ್‌ನಿಂದ ಆಯ್ಕೆಯಾದ ಬಿಜೆಪಿ ಸದಸ್ಯೆ ಸುಮನ ಜಿ ಭಟ್ ಅವರಿಗೆ ಮತ ನೀಡಿದರು. ಈ ಮೂಲಕ ಎಲ್‌ಡಿಎಫ್ ಅಭ್ಯರ್ಥಿ ದಿನೇಶ್ವರಿ ನಾಗೇಶ್ ಅವರು 3–2 ಮತಗಳಿಂದ ಸೋಲನ್ನು ಅನುಭವಿಸಿದರು.

ಇದಕ್ಕೂ ಮೊದಲು ನಡೆದ ಸ್ಟ್ಯಾಂಡಿಂಗ್ ಸಮಿತಿ ಪ್ಯಾನೆಲ್ ಚುನಾವಣೆಯಲ್ಲಿಯೂ ಯುಡಿಎಫ್ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದ್ದರು. ಈ ಘಟನೆ ಕೇರಳ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಪೈವಳಿಕೆಯ ರಾಜಕೀಯ ಬೆಳವಣಿಗೆಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಪ್ರಮುಖ ಚರ್ಚಾ ವಿಷಯವಾಗುವ ಸಾಧ್ಯತೆ ಇದೆ.

ಕೋ .ಲೀ. ಬಿ(ಯುಡಿಎಫ್–ಬಿಜೆಪಿ) ಮೈತ್ರಿಯ ವಿರುದ್ಧ ರಾಜಕೀಯ ಅಭಿಯಾನ ನಡೆಸಲು ಸಿಪಿಐ(ಎಂ) ತೀರ್ಮಾನಿಸಿದ್ದು, ಇದರ ಭಾಗವಾಗಿ ವಾಹನ ಪ್ರಚಾರ ಜಾಥೆಯನ್ನು ಸಹ ಆಯೋಜಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!