ಸಿಎಂ ಸಿದ್ದರಾಮಯ್ಯ ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕು- ನಟ ಪ್ರಕಾಶ್ ರಾಜ್

ಉಡುಪಿ:ಸಿಎಂ ಸಿದ್ದರಾಮಯ್ಯನವರು ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. ಆಪ್ತ ವಲಯದ ಮೇಲಿನ ಭ್ರಷ್ಟಾಚಾರದ ಆರೋಪಗಳು ಶೋಭೆ ತರುವುದಿಲ್ಲ. ಹೀಗಾಗಿ ಅದೆಲ್ಲವನ್ನು ಸರಿಮಾಡಿಕೊಂಡು ಪಾರದರ್ಶಕವಾದ ಆಡಳಿತ ನೀಡಬೇಕೆನ್ನುವುದು ನನ್ನ ಆಶಯ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಕಾಲಘಟ್ಟ ಬೇರೆ, ಸಿದ್ದರಾಮಯ್ಯ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಒಳ್ಳೆಯ ಅಹಿಂದ‌ ನಾಯಕರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಬರೀ ಹೊಗಳುಭಟ್ಟ ಅಲ್ಲ‌….

Read More

ಜನವರಿ 16 ರಂದು ಟೈ ಮಂಗಳೂರು ವತಿಯಿಂದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ – ಟೈಕಾನ್ ಮಂಗಳೂರು 2026 , ಯುವ ಸ್ಟಾರ್ಟಪ್ ಗಳಿಗೆ ಸುವರ್ಣ ಅವಕಾಶ … !

ಮಂಗಳೂರು:ರಾಷ್ಟ್ರೀಯ ಸ್ಟಾರ್ಟಪ್ ದಿನವಾದ ಜ. 16 ರಂದು ಮಂಗಳೂರಿನಲ್ಲಿ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ಟೈಕಾನ್ ಮಂಗಳೂರು 2026, ಡಾ. ಟಿ ಎಂ ಏ ಪೈ ಕನ್ವೆನ್ನನ್ ಸೆಂಟರ್ ನಲ್ಲಿ ಜರುಗಲಿದೆ ಎಂದು ಟೈ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ರೋಹಿತ್ ಭಟ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಪ್ರತಿನಿಧಿಗಳು,50ಕ್ಕೂ ಅಧಿಕ ಹೂಡಿಕೆದಾರರು , 40ಕ್ಕೂ ಅಧಿಕ ಆಹ್ವಾನಿತ ಗಣ್ಯರು , 30ಕ್ಕೂ ಅಧಿಕ ಸ್ಟಾರ್ಟಪ್…

Read More

ಜನವರಿ 11 ರಂದು ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಮಂಗಳೂರಿನಲ್ಲಿ … !

ಮಂಗಳೂರು:ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಜನವರಿ 11ಕ್ಕೆ ಮಂಗಳೂರಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸಿಎ ಜಗನ್ನಾಥ್ ಕಾಮತ್ ಹೇಳಿದರು . ಅವರು ನಗರದ ಖಾಸಗಿ ಹೊಟೇಲ್ ಹಾಲ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ‌ಮಂಗಳೋತ್ಸವದ ಪೂರ್ವಭಾವಿಯಾಗಿ ಜನವರಿ ಐದಕ್ಕೆ ಕರ್ನಾಟಕ, ಕೇರಳದಿಂದ ಹೊರೆಕಾಣಿಕಾ ಸೇವಾ ಸಮರ್ಪಣೆ ನಡೆದಿದೆ. ದೇಶದ ವಿವಿಧೆಡೆಗಳಿಂದ ವ್ಯಾಸಧ್ವಜ ಸಂಕೀರ್ತನಾ ಪಾದಯಾತ್ರೆ ‌ಮಂಗಳೂರಿಗೆ ಆಗಮಿಸುತ್ತಿದೆ ಎಂದ ಅವರು, ಈ…

Read More

ಆಶಾಜ್ಯೋತಿ ಸಂಸ್ಥೆಯಿಂದ ಜನವರಿ 11ರಂದು ದಿವ್ಯಾಂಗರಿಗಾಗಿ ಮಂಗಳೂರಿನಲ್ಲಿ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ

ಮಂಗಳೂರು:ಸೇವಾ ಭಾರತಿ(ರಿ ) ಮಂಗಳೂರು ಇದರ ಘಟಕವಾಗಿರುವ ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿ ಆಯೋಜಿಸಿಕೊಂಡು ಬರುತಿದ್ದು ಈ ಭಾರಿ ಕಾರ್ಯಕ್ರಮವನ್ನು ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ ನ ಸಹಭಾಗಿತ್ವದಲ್ಲಿ ಜನವರಿ 11 ರಂದು ಬೆಳಿಗ್ಗೆ 8.30ರಿಂದ ಸಂಜೆ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ(ರಿ ) ಮಂಗಳೂರು ಇದರ ಕಾರ್ಯದರ್ಶಿಗಳಾದ ಹೆಚ್ ನಾಗರಾಜ್ ಭಟ್ ನಗರದ ಚೇತನ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ….

Read More

ಜ. 31ರಂದು ಪ್ರೊಆ್ಯಮ್ ಗಾಲ್ಫ್ ಟೂರ್ನಮೆಂಟ್ ಗೆ ಮಂಗಳೂರು ನಗರ ಸಾಕ್ಷಿ … !

ಮಂಗಳೂರು:ಪ್ಲಡ್ ಲೈಟಿಂಗ್ ವ್ಯವಸ್ಥೆಯೊಂದಿಗೆ 18 ಹೋಲ್‌ಗಳೊಂದಿಗೆ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಆಗಿ ಪರಿತರ್ವನೆಗೊಂಡಿರುವ ಪಿಲಿಕುಳದ ಗಾಲ್ಫ್ ಕೋರ್ಸ್‌ನಲ್ಲಿ ಜ. 31ರಂದು ಪ್ರೊಆ್ಯಮ್ (ಪ್ರೊಫೆಶನಲ್ ಅಮೆಚೂ‌ರ್) ಗಾಲ್ಫ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಪಿಲಿಕುಳ ಗಾಲ್ಫ್ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಶ್ವಮಟ್ಟದ ಕೋರ್ಸ್ ಸಿದ್ಧತೆ ಮತ್ತು ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯೊಂದಿಗೆ ಪಿಲಿಕುಳ ಗಾಲ್ಫ್ ಕ್ಲಬ್‌ಭಾರತೀಯ ಗಾಲ್ಫ್ ಕ್ರೀಡೆಯಲ್ಲಿ ನವೀನತೆ ಮತ್ತು ಸ್ಪರ್ಧಾತ್ಮಕ ಶ್ರೇಷ್ಟತೆಯನ್ನು ಒಟ್ಟುಗೂಡಿಸಿ ಹೊಸ…

Read More

ಕಾಸರಗೋಡು ಗಡಿನಾಡು ಕನ್ನಡಿಗರ ಸಮಸ್ಯೆ ಹಾಗೂ ಮಲಯಾಳಂ ಭಾಷಾ ಬಿಲ್–2025 ವಿರೋಧಿಸಿ ಕೇರಳ ರಾಜ್ಯಪಾಲರ ಭೇಟಿ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಸರ್ಕಾರದ ಪ್ರಾಧಿಕಾರವಾಗಿದ್ದು, ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಹಿತಾಸಕ್ತಿಯಿಂದ, ಗಮನಿಸುವುದಾದರೆ ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ “ಮಲಯಾಳಂ ಭಾಷಾ ಬಿಲ್-2025” ಎಂಬ ಬಿಲ್ಲನ್ನು ಅಂಗೀಕರಿಸಿದೆ. ಈಗಾಗಲೇ ಇಂತಹ ಬಿಲ್ಲನ್ನು 2017 ರಲ್ಲಿ ಭಾರತದ ಮಾನ್ಯ ರಾಜ್ಯಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ…

Read More

ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮ … !

ಮಂಗಳೂರು:ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ ಪ್ರತಿಷ್ಠಿತ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ”* ಸಂಗೀತ ಕಾರ್ಯಕ್ರಮವನ್ನು ಜನವರಿ 9 ರಂದು ಸಂಜೆ 5.30 ರಿಂದ ಮಂಗಳೂರಿನ *ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಠ ಇದರ ಜಿಲ್ಲಾಧ್ಯಕ್ಷರಾದ ಲ / ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಇದೇ ಮೊದಲ ಬಾರಿ *ಬಿನಾಕಾ ಗೀತಮಾಲಾ ಸಂಯೋಜನೆಯೊಂದಿಗೆ ಆಯೋಜಿಸಲಾಗುತ್ತಿದೆ.ಈ…

Read More

ಖಗ ಪ್ರೇಮಿಗಳಿಗೆ ಸಿಹಿ ಸುದ್ದಿ ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ 12ನೇ ಕರ್ನಾಟಕ ಪಕ್ಷಿ ಉತ್ಸವ ಹಕ್ಕಿ ಹಬ್ಬ .. !

ಮಂಗಳೂರು:12ನೇ ಕರ್ನಾಟಕ ಹಕ್ಕಿ ಹಬ್ಬವು ಜನವರಿ 9 ರಿಂದ 11 ರವರೆಗೆ ಮಂಗಳೂರಿನಲ್ಲಿ ನಡೆಯಲಿದ್ದು ಇದರ ಉದ್ಘಾಟನೆಯು ಪಿಲಿಕುಳದಲ್ಲಿ ನಡೆಯಲಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾದ ಶಾಲೆಟ್ ಪಿಂಟೊ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಮೂರು ದಿನಗಳ ಹಕ್ಕಿ ಹಬ್ಬದಲ್ಲಿ ಹಕ್ಕಿಗಳ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಕ್ಕಿ ಹಬ್ಬವನ್ನು…

Read More

ಗುರುಪುರದಲ್ಲಿ ಯುವತಿ ಆತ್ಮಹತ್ಯೆ ಪ್ರಕರಣ:ಜಾತಿ ಕಾರಣದಿಂದ ಮದುವೆ ನಿರಾಕರಣೆ.ಆರೋಪಿಯ ಬಂಧನ

ಮಂಗಳೂರು:ಗುರುಪುರದಲ್ಲಿ ಯುವತಿ ಆತ್ಮಹತ್ಯೆಗೆ ಜಾತಿ ಕಾರಣದಿಂದ ಮದುವೆ ನಿರಾಕರಣೆ, ನಿರ್ಲಕ್ಷ್ಯವೇ ಕಾರಣ ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಗಂಜಿಮಠ ಮಳಲಿ ನಿವಾಸಿ ಮನೋಜ್ ಅಲಿಯಾಸ್ ಮುರಳಿ ಪೂಜಾರಿ ಬಂಧಿತ ಆರೋಪಿ. ಮೂಡಬಿದ್ರೆಯ ನವ್ಯಾ (20) ಸೋಮವಾರ ಸ್ನೇಹಿತೆಯನ್ನು ಭೇಟಿಯಾದ ಬಳಿಕ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ನವ್ಯಾ ಆತ್ಮಹತ್ಯೆಗೆ…

Read More

ಅಯ್ಯಪ್ಪ ದೇವಸ್ಥಾನದ ಅರವಣ ಪಾಯಸಕ್ಕೆ ಇದೆಂಥಾ ವಿಘ್ನ … ! 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗಿ ₹1.60 ಕೋಟಿ ರೂ. ನಷ್ಟ… !

ಶಬರಿಮಲೆ : ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರಿಗೆ ವಿತರಿಸಲು ಸಿದ್ಧಪಡಿಸಲಾಗಿದ್ದ 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡ ಪರಿಣಾಮ ಕಲ್ಲಿನಂತೆ ಗಟ್ಟಿಯಾಗಿ ಮಾರ್ಪಟ್ಟಿದ್ದು, ಇದರಿಂದ ದೇವಸ್ವಂ ಮಂಡಳಿಗೆ ಸುಮಾರು ₹1.60 ಕೋಟಿ ರೂ. ನಷ್ಟ ಉಂಟಾಗಿದೆ. ಬೆಲ್ಲದ ಹೆಚ್ಚಿನ ಸಿಹಿ ಅಂಶವೇ ತೇವಾಂಶ ನಷ್ಟಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ಮಂಡಲಕಲಾ ಯಾತ್ರೆಗೆ ಮುನ್ನ ಮೀಸಲು ರೂಪದಲ್ಲಿ ತಯಾರಿಸಲಾದ ಈ ಅರವಣ ಮಹಸರವನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಬೇಕಾದ ಕಾರಣ, ಅಡುಗೆ ಪ್ರಕ್ರಿಯೆಯಲ್ಲಿ ತೇವಾಂಶವನ್ನು ಗರಿಷ್ಠ…

Read More
error: Content is protected !!