Headlines

ಹಂಚಿಕೆ ಮಾಡಿದ ಸಂಪೂರ್ಣ ಅನುದಾನ ಬಿಡುಗಡೆಯಾಗಿಲ್ಲ; ಶಬರಿಮಲೆ ಮಾಸ್ಟರ್ ಪ್ಲಾನ್ ಕುರಿತು ಮಾತು ಉಳಿಸದ ಎಲ್‌ಡಿಎಫ್ ಸರ್ಕಾರ

ಶಬರಿಮಲೆ ಮಾಸ್ಟರ್ ಪ್ಲಾನ್ ಕುರಿತು ನೀಡಿದ ಭರವಸೆಯನ್ನು ಎಲ್‌ಡಿಎಫ್ ಸರ್ಕಾರ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಬರಿಮಲೆಗೆ ಮೀಸಲಿಟ್ಟ ಸಂಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ಮಾಸ್ಟರ್ ಪ್ಲಾನ್‌ಗೆ ಒಟ್ಟು 275 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದರೂ, ಅದರಲ್ಲಿ ಕೇವಲ 85.45 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊತ್ತದಲ್ಲಿ 85.39 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಮಾಹಿತಿ ಶಬರಿಮಲೆ ಹೈಪವರ್ ಸಮಿತಿಯ ದಾಖಲೆಗಳಿಂದ ಬಹಿರಂಗವಾಗಿದೆ. ಈ ದಾಖಲೆಗಳು ಟ್ವೆಂಟಿಫೋರ್ ಸುದ್ದಿವಾಹಿನಿಗೆ ಲಭ್ಯವಾಗಿವೆ. 2016–17ನೇ ಹಣಕಾಸು ವರ್ಷದಲ್ಲೇ 275…

Read More

ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಜತೆ ತುಂಬೆ ಗ್ರೂಪ್ ಒಪ್ಪಂದಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಅಧ್ಯಾಯ

ಅಜ್ಮಾನ್: ಸ್ವಿಟ್ಸರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (GCLS) ಹಾಗೂ ತುಂಬೆ ಗ್ರೂಪ್ ನಡುವೆ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಹಾಕಲಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಲಾಂಗ್ವಿಟಿ ವೈದ್ಯಕೀಯ, ಆರೋಗ್ಯಕರ ವಯಸ್ಸಾಗುವಿಕೆ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ಪ್ರಿಸಿಷನ್ ಹೆಲ್ತ್ ಕ್ಷೇತ್ರಗಳಲ್ಲಿ ರಚನಾತ್ಮಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಒಪ್ಪಂದದಡಿ ಹೊಸದಾಗಿ ಸ್ಥಾಪನೆಯಾಗಿರುವ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್ ಮೂಲಕ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಯುಎಇಯಲ್ಲಿ…

Read More

ಜೋಡಿಗಳಿಗಾಗಿ ವಿಶೇಷ ರೀಲ್ಸ್ ಸ್ಪರ್ಧೆ ಆಯೋಜನೆ

ತುಳುನಾಡು ಜವನೆರ್ ಬೆಂಗಳೂರು (ರಿ) ವತಿಯಿಂದ ‘ಐಸಿರದ ಜೋಡಿ’ ಹೆಸರಿನ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸ್ಪರ್ಧೆ, ತುಳುನಾಡಿನ ವಿವಿಧ ಜೋಡಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದೆ. ಗಂಡ-ಹೆಂಡತಿ, ಅಣ್ಣ-ತಂಗಿ, ತಂದೆ-ಮಗಳು, ತಾಯಿ-ಮಗ, ಗೆಳೆಯ-ಗೆಳತಿ ಸೇರಿದಂತೆ ಯಾವುದೇ ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಾಳುಗಳು ತಮ್ಮದೇ ಆದ ಸೃಜನಶೀಲತೆಯೊಂದಿಗೆ ರೀಲ್ಸ್ ವಿಡಿಯೋ ಸಿದ್ಧಪಡಿಸಿ ಕಳುಹಿಸುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ. ಆಕರ್ಷಕ ಬಹುಮಾನಗಳು…

Read More

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಹತ್ವದ ಯಶಸ್ಸು ಸಾಧಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಶಾದ್ (32) ಅವರನ್ನು ಬೆಂಗಳೂರಿನಲ್ಲಿ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ ಅಬ್ದುಲ್ ನಾಸಿರ್ (41) ಅವರನ್ನು ಕೇರಳದ ಕೊಚ್ಚಿಯಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಲೆ ಕೃತ್ಯ ಎಸಗಿದ್ದ…

Read More

ಅಮೆರಿಕ–ಇರಾನ್ ಸಂಘರ್ಷ ತೀವ್ರ: ಹಾರ್ಮುಜ್ ಜಲಸಂಧಿ ಸುತ್ತ ಯುದ್ಧದ ಕಾರ್ಮೋಡ

ಟೆಹ್ರಾನ್: ಹಾರ್ಮುಜ್ ಜಲಸಂಧಿ ನಿಯಂತ್ರಣ ವಿಚಾರವಾಗಿ ಅಮೆರಿಕ–ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕ ಇರಾನ್‌ನ ಬಂದರ್ ಅಬ್ಬಾಸ್, ಜಾಸ್ಕ್, ಸಿರಿಕ್ ಹಾಗೂ ಕೇಶ್ಮ್ ದ್ವೀಪದ ಸೇನಾ ಮತ್ತು ನೌಕಾ ತಾಣಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಕಳೆದ ಮೂರು ದಿನಗಳಲ್ಲಿ 300ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆದಿದ್ದು, 140ಕ್ಕೂ ಹೆಚ್ಚು ಪ್ರಮುಖ ಸೇನಾ ತಾಣಗಳು ಹಾನಿಗೊಳಗಾಗಿವೆ ಎಂದು CENTCOM ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕ ಸೇನಾ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ…

Read More

ಸುಳ್ಯ ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಕಾಸರಗೋಡು, ಜು. 13:* ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಸದಸ್ಯರಾಗಿರುವ, ಸಾಹಿತ್ಯ–ಸಂಸ್ಕೃತಿ ಪೋಷಕರಾದ ಶ್ರೀ ಚಂದ್ರಶೇಖರ ಪೇರಾಲು ಅವರನ್ನು ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ – 2026”ಗೆ ಆಯ್ಕೆ ಮಾಡಲಾಗಿದೆ. ಜುಲೈ 26ರಂದು ಕನ್ನಡ ಭವನದ *ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ…

Read More

ದೇಗುಲಗಳ ಪುನರ್ ಪ್ರತಿಷ್ಠೆಯಂತ ಕಾರ್ಯಗಳು ಹಿಂಧೂ ಸಮಾಜದ ಒಗ್ಗಟ್ಟಿಗೆ ಪೂರಕವಾಗಲಿ. ಎಡನೀರು ಶ್ರೀಗಳು.

ಕಾಸರಗೋಡು: ಅಣಂಗೂರು ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಶ್ರೀ ದೇವಿಯ ರಜತ ಫಲಕದ ಪುನರ್ ಪ್ರತಿಷ್ಠೆ ಹಾಗೂ ಶ್ರೀ ನಾಗನ ಕಟ್ಟೆಯ ಪುನರ್ ನಿರ್ಮಾಣ ಮತ್ತು ಪ್ರತಿಷ್ಠಾ ಮಹೋತ್ಸವದ ಧನಸಂಗ್ರಹಕ್ಕೆ ಚಾಲನೆ ನೀಡುವ ಉದ್ದೇಶದಿಂದ ‘ಶ್ರೀ ಶಾರದಾ ನಿಧಿ’ ಲಕ್ಕಿ ಕೂಪನ್ ಅನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿಯ ರಕ್ಷಾಧಿಕಾರಿಯೂ ಆಗಿರುವ ಕೊಡುಗೈ ದಾನಿ ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದರು….

Read More

ಅಂತಾರಾಷ್ಟ್ರೀಯ ಯೋಗರತ್ನ ನಾಗರತ್ನ ಎಸ್. ಹಿರೇಮಠ ಅವರಿಗೆ “ಕನ್ನಡ ಪಯಸ್ವಿನಿ ಯೋಗರತ್ನ ಅಚೀವ್ಮೆಂಟ್ ಅವಾರ್ಡ್–2026”

ಕಾಸರಗೋಡು, ಜು. 12: ಕನ್ನಡಪರ ಹೋರಾಟಗಾರ್ತಿ, ಕವಯತ್ರಿ, ಲೇಖಕಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿರುವ ಯೋಗರತ್ನ ನಾಗರತ್ನ ಎಸ್. ಹಿರೇಮಠ ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಯೋಗರತ್ನ ಅಚೀವ್ಮೆಂಟ್ ಅವಾರ್ಡ್–2026” ಘೋಷಿಸಲಾಗಿದೆ. ಬೆಂಗಳೂರು ಪದ್ಮನಾಭನಗರ ನಿವಾಸಿಯಾಗಿರುವ ನಾಗರತ್ನ ಎಸ್. ಹಿರೇಮಠ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷೆಯಾಗಿ, ಕನ್ನಡ ಜಾನಪದ ಪರಿಷತ್ ಮಹಿಳಾ ಅಧ್ಯಕ್ಷೆಯಾಗಿ ಹಾಗೂ ಪದ್ಮನಾಭನಗರ ಶರಣ ಸಾಹಿತ್ಯ ಮಹಿಳಾ…

Read More

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಾರ್ಕಲಿ ಸಲೀಂ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ”

ಕಾಸರಗೋಡು, : ಮಂಡ್ಯ ಜಿಲ್ಲೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕವಿ, ಸಾಹಿತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಾರ್ಕಲಿ ಸಲೀಂ (ಸಲೀಂಪಾಷ) ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಘೋಷಿಸಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದವರಾದ ಸಲೀಂಪಾಷ ಅವರು ದಿ. ಷೇಕ್ ಮಹಮದ್ ಹಾಗೂ ಮಹಬೂಬ್ ಜಾನ್ ಅವರ ಪುತ್ರರಾಗಿದ್ದು, 1971ರ ಮಾರ್ಚ್ 20ರಂದು ಜನಿಸಿದ್ದಾರೆ. ಪ್ರಾಥಮಿಕ…

Read More

ಲಕ್ಷ್ಮೀ ವಿ ಭಟ್ ಇವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026

ಕಾಸರಗೋಡು : ನಿವೃತ್ತ ಶಿಕ್ಷಕಿ, ಸಾಹಿತಿ ಮಂಜೇಶ್ವರದ ತಲಂಜೇರಿಯ ಲಕ್ಷ್ಮಿ ವಿ ಭಟ್ ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ನೀಡುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ ಮಾಡಲಾಗುವುದು. ಇದೇ ಜು.26ರಂದು ಕಾಸರಗೋಡಿನ ಕನ್ನಡ ಭವನದ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಐ ಎ ಎಸ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಈ ಗೌರವ…

Read More
error: Content is protected !!