ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ: ದೋಹಾ ಡೈಮಂಡ್ ಲೀಗ್ ನಲ್ಲಿ ಸ್ಟಾರ್ ಜಾವೆಲಿನ್ ಪಟು ಐತಿಹಾಸಿಕ ಸಾಧನೆ
ವಿಶ್ವದಲ್ಲಿ ಕೇವಲ 25 ಮಂದಿ ಮಾತ್ರ ಜಾವೆಲಿನ್ ಎಸೆತದಲ್ಲಿ 90 ಮೀಟರ್ ಗಿಂತ ದೂರ ಎಸೆದಿದ್ದಾರೆ. ಅಂತಹ ಅಪರೂಪದ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಇದೀಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 90 ಮೀಟರ್ ಗಡಿ ದಾಟಿ ಸಾಧನೆ ಮಾಡಿದರು. ಆದರೂ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತರಾಗಬೇಕಾಯಿತು. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ಎಸೆದು ಪ್ರಥಮ ಸ್ಥಾನ ಪಡೆದರು. ಭಾರತದ ಕಿಶೋರ್ ಜೆನಾ 8ನೇ…
