ಕೋಳಿ ಅಂಕ ವಿವಾದದ ಬಗ್ಗೆ ಸ್ಪೀಕರ್ ಯು ಟಿ ಖಾದರ್

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಅಂಕ ನಿಷೇಧ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್ ಖಾದರ್ ಅವರು, ‘ಕೋಳಿ ಅಂಕದಲ್ಲಿ ಜೂಜು ನಡೆಯುತ್ತದೆ ಎಂಬುದು ಪೊಲೀಸ್ ಇಲಾಖೆಯ ಆರೋಪ. ಜೂಜು ನಡೆದರೆ, ಅದರಲ್ಲಿ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು. ಸಾಂಪ್ರದಾಯಿಕ ಕೋಳಿ ಅಂಕವನ್ನೇ ತಡೆಯುವುದು ಸರಿಯಲ್ಲ ಎಂಬುದು ಆಯೋಜಕರ ವಾದ. ಈ ಸಮಸ್ಯೆಯನ್ನು ಸೂಕ್ತ ನಿಯಮಗಳನ್ನು ರೂಪಿಸುವ ಮೂಲಕವೇ ಬಗೆಹರಿಸಬೇಕಿದೆ. ಈ ಬಗ್ಗೆ ಕಾನೂನು ಸಚಿವರು ಮತ್ತು ಸರ್ಕಾರದ ಕಾನೂನು ಸಲಹೆಗಾರರ ಜೊತೆ ಮಾತನಾಡಿ, ಸಲಹೆಗಳನ್ನು ಕೊಟ್ಡಿದ್ದೇನೆ….

Read More

ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು ಜ3: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.‌ಗೃಹ ಕಚೇರಿ ಕೃಷ್ಣಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ಧತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೋದಿ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ…

Read More

ಕೃಷ್ಣ ನಗರಿಯಲ್ಲಿ “ಅಕ್ಕ ಪಡೆ ವಾಹನ”ಕ್ಕೆ ಚಾಲನೆ… !

ಉಡುಪಿ:ದೌರ್ಜನ್ಯ, ತೊಂದರೆಗೊಳಗಾಗುವ ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಮೂಲಕ‌ ಜಾರಿಗೊಳಿಸಿರುವ ಅಕ್ಕ ಪಡೆ ವಾಹನಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಚಾಲನೆ ನೀಡಲಾಯಿತು. ಅಕ್ಕ ಪಡೆ ವಾಹನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಈ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ. ನಗರ ಪ್ರದೇಶದಲ್ಲಿ ದೌರ್ಜನ್ಯಕ್ಕೊಳಗಾಗುವ ಹೆಣ್ಣುಮಕ್ಕಳಿಗೆ ತ್ವರಿತಗತಿಯಲ್ಲಿ…

Read More

ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ 2026ರಿಂದ ಹೊರೆಕಾಣಿಕೆ ನೀಡಿಕೆ … !

ಉಡುಪಿ : ಶ್ರೀ ಕೃಷ್ಣಮಠದ ಇತಿಹಾಸದಲ್ಲಿ ಹಿಂದೂ-ಮುಸ್ಲಿಮರ ಸೌಹಾರ್ದತೆಯ ಬಗ್ಗೆ ಹಲವಾರು ಘಟನೆಗಳನ್ನು ನಾವು ನೀವೆಲ್ಲರೂ ಕೇಳಿರುತ್ತೇವೆ. ಪುರಾತನ ಕಾಲದಿಂದಲೂ ಶ್ರೀ ಕೃಷ್ಣ ಮಠದಲ್ಲಿ ನಡೆದು ಬರುತ್ತಿರುವ ಹಿಂದೂ-ಮುಸ್ಲಿಮರ ಸೌಹಾರ್ದತೆ ಹಾಗೂ ಐಕ್ಯತೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹಲವಾರು ವರ್ಷಗಳಿಂದ ಪರ್ಯಾಯ ಹಾಗೂ ಇನ್ನಿತರ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ.ಈ ಸಲದ ಶೀರೂರು ಮಠದ ಪರ್ಯಾಯ ಸಂದರ್ಭದಲ್ಲೂ ಸಮಿತಿ ವತಿಯಿಂದ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ. ಜನವರಿ 9 ರಂದು ನಡೆಯುವ ಪುರಪ್ರವೇಶ…

Read More

ಚಿತ್ರ ಕಲಾ ಮಾಂತ್ರಿಕ ಆಶೀಶ್ ಎಂ ರಾವ್ ವಾಮಂಜೂರ್ ಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026.ಗೆ ಆಯ್ಕೆ.

ಚಿತ್ರ ಕಲಾ ಮಾಂತ್ರಿಕ ಆಶೀಶ್ ಎಂ ರಾವ್ ವಾಮಂಜೂರ್ ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

49ನೇಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ ಜನವರಿ 10ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ

49ನೇಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ * ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ . ಪತ್ರಿಕೆಯ ವತಿಯಿಂದ ನಡೆಯುವ 49ನೇ ಸರಣಿ ಕೃತಿ ಬಿಡುಗಡೆ ಹಿರಿಯ ಸಾಹಿತಿ ಬಿ .ಸತ್ಯವತಿ ಭಟ್ ಕೊಳಚಪ್ಪುರವರ ಕೌಟುಂಬಿಕ ಕಥಾಸಂಕಲನ * ಹೆಜ್ಜಾಲದ ಬಿಳಲುಗಳು ಕೃತಿ ಲೋಕಾರ್ಪಣೆಯೂ ಜನವರಿ 10ರಂದು ಶನಿವಾರ 10.30ಕ್ಕೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಅರುಣ ನಾಗರಾಜ್ ವಹಿಸುವರು…

Read More

ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಇಲ್ಲ…20 ವರ್ಷ ನಂತರ ನೋಡುವಾ – ಸ್ಪೀಕರ್ ಖಾದರ್

ಮಂಗಳೂರು: ಸಿಎಂ ಆಗ್ಲಿಕ್ಕೆ ಅರ್ಜೆಂಟ್ ಇಲ್ಲ..ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌. ಕ್ಷೇತ್ರದ ಮತದಾರರು ಇನ್ನೂ ನಾಲ್ಕು ಸಲ ಗೆಲ್ಲಿಸಿ ಕಳುಹಿಸಿದರೆ, ಅಮೇಲೆ ನೋಡುವ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಹುದ್ದೆಗೆ ತಾವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ‘ಅದಕ್ಕೆ ತರಾತುರಿ ಇಲ್ಲ. ಅದಕ್ಕಿನ್ನೂ 20 ವರ್ಷ ಕಾಲಾವಕಾಶ ಇದೆ‌ ಎಂದರು. ಬಳ್ಳಾರಿ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಸಿನಿಮೀಯ ಶೈಲಿಯಲ್ಲಿ ಪರಸ್ಪರ ಕಚ್ಚಾಡುವುದು, ರಾಜಕೀಯ ದ್ವೇಷ ಸಾಧಿಸುವುದು ಸರಿಯಲ್ಲ. ಇ‌ಂತಹ…

Read More

ಮಾಧ್ಯಮ ಶ್ರೇಷ್ಠ,ಕೃತಿಕರ್ತೃ, ಸಮಾಜ ಸೇವಕ ರಂಗನಾಥ್ ಮೈಸೂರ್ ರೀಗೆ ಕನ್ನಡ ಭವನದ ಪ್ರತಿಷ್ಠಿತ ” ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ.

ಕಾಸರಗೋಡು:ಮಾಧ್ಯಮ ಶ್ರೇಷ್ಠ,ಕೃತಿಕರ್ತೃ, ಸಮಾಜ ಸೇವಕ ರಂಗನಾಥ್ ಮೈಸೂರ್ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ

Read More

ಸಂಘಟಕ, ಮಾಧ್ಯಮ ಕ್ಷೇತ್ರ ಶ್ರೇಷ್ಠ ಶ್ರೀ ಅಚ್ಚುತ ಚೇವಾರ್ ರೀಗೆ ಕನ್ನಡ ಭವನದ ಪ್ರತಿಷ್ಠಿತ, ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.

ಕಾಸರಗೋಡು:ರಾಜಕೀಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪತ್ರಕರ್ತರಾಗಿ ಸಂಘಟಕರಾಗಿ ಕನ್ನಡವನ್ನೇ ಉಸಿರಾಗಿಸಿಕೊಂಡ ಅಚ್ಚುತ ಚೇವಾರ್ ರೀಗೆ ಕನ್ನಡ ಭವನದ ರಜತ ಸಂಭ್ರಮ 18.01.2026ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದಲ್ಲಿ ನಡೆಯಲಿರುವ “ನಾಡು -ನುಡಿ ಹಬ್ಬ “ಕಾರ್ಯಕ್ರಮದಲ್ಲಿ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಜ.3-4: ತಣ್ಣೀರುಬಾವಿ ಮ್ಯೂಸಿಕ್ ಫೆಸ್ಟಿವಲ್ ಹಿನ್ನಲೆ ವಾಹನ ಪಾರ್ಕಿಂಗ್ ಸ್ಥಳ ನಿಗದಿ, ಸಂಚಾರ ನಿಯಮ ಪಾಲನೆಗೆ ನೂತನ ಗೈಡ್ ಲೈನ್ .. !

ಮಂಗಳೂರು:ದ.ಕ. ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್‌ನಲ್ಲಿ ಜ.3 ಮತ್ತು 4ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿದೆ. ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಸಾರ್ವಜನಿಕರು ತನ್ನ ವಾಹನಗಳನ್ನು ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ನಿಗದಿಪಡಿಸಿದ…

Read More
error: Content is protected !!