Headlines

ಹೊಸಬೆಟ್ಟಿನಲ್ಲಿ ಕಳ್ಳರ ಕೈಚಳಕ: ಮನೆ ಕಪಾಟಿನಿಂದ ಚಿನ್ನದ ಸರ, ₹8 ಸಾವಿರ ಕಳವು

ಕಾಸರಗೋಡು: ಮಂಜೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಬೆಟ್ಟು ಪ್ರದೇಶದ ಮನೆಯಿಂದ ಮೂರುವರೆ ಪವನ್ ತೂಕದ ಚಿನ್ನದ ಸರ ಹಾಗೂ ₹8,000 ನಗದು ಕಳ್ಳತನವಾಗಿದೆ ಎಂದು ದೂರು ದಾಖಲಾಗಿದೆ. ಗುಡ್ಡಗೇರಿ ಸೀನತ್ ಮಂಝಿಲ್ ನಿವಾಸಿ ಸೌದ (41) ಅವರು ನೀಡಿದ ದೂರಿನ ಆಧಾರದ ಮೇಲೆ ಮಂಜೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ ಜುಲೈ 6ರಂದು ಸಂಜೆ 5 ಗಂಟೆಯೊಳಗಿನ ಅವಧಿಯಲ್ಲಿ ಕಳ್ಳತನ ನಡೆದಿರಬಹುದು ಎಂದು ಸೌದ ಅವರು ದೂರಿನಲ್ಲಿ ತಿಳಿಸಿದ್ದಾರೆ….

Read More

ಕಾಸರಗೋಡು: ವಿದ್ಯುತ್ ತಂತಿ ದುರಸ್ತಿ ವೇಳೆ ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶಿಸಿ ಸಾವು

​ಕಾಸರಗೋಡು: ಮಡಿಕೈಯ ಕಣಚ್ಚಿರದಲ್ಲಿ ವಿದ್ಯುತ್ ತಂತಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಎಸ್‌ಇಬಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಇಂದು (ಶುಕ್ರವಾರ) ಬೆಳಿಗ್ಗೆ ನಡೆದಿದೆ. ​ಮೃತಪಟ್ಟವರನ್ನು ಕೆಎಸ್‌ಇಬಿ ಮಾವುಂಗಾಲ್ ಸೆಕ್ಷನ್‌ನ ಲೈನ್‌ಮ್ಯಾನ್, ಪುಲ್ಲೂರು ಮಧುರಂಪಾಡಿಯ ಭರತನ್ (52) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ​ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕಾಗಿ ಕಂಬವೇರಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ವಿದ್ಯುತ್ ತಂತಿಯಲ್ಲೇ ಸಿಲುಕಿದ್ದ ಮೃತದೇಹವನ್ನು ಬಳಿಕ ಸ್ಥಳಕ್ಕೆ ಆಗಮಿಸಿದ ಕಾಂಞಂಗಾಡ್ ಅಗ್ನಿಶಾಮಕ ದಳದ…

Read More

ಅಯೋಧ್ಯೆ ದೇಣಿಗೆ ಹಗರಣದ ಬಳಿಕ ಸಾಮೂಹಿಕ ರಾಜೀನಾಮೆ; ಕಾಣಿಕೆ ಎಣಿಕೆ ವಿಭಾಗದ 24 ಸಿಬ್ಬಂದಿ ಹುದ್ದೆ ತೊರೆದರು

ದೇಣಿಗೆ ದುರ್ಬಳಕೆ ಪ್ರಕರಣದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಸಾಮೂಹಿಕ ರಾಜೀನಾಮೆ ನಡೆದಿದೆ. ಕಾಣಿಕೆ ಎಣಿಕೆ ವಿಭಾಗದ ಸುಮಾರು 24 ಸಿಬ್ಬಂದಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಣಿಗೆ ಹಗರಣದ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ, ವೇತನ ಕಡಿತ ಮಾಡಲಾಗಿದೆ ಹಾಗೂ ರಜೆಗಳನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪದೊಂದಿಗೆ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಆಡಳಿತಕ್ಕೆ ಹಲವು ಬಾರಿ ದೂರು ನೀಡಿದರೂ ಯಾವುದೇ…

Read More

‘ಎಲ್ಲವನ್ನೂ ತ್ಯಜಿಸಿ ಜನರಿಗಾಗಿ ಬಂದಿದ್ದೇನೆ; ಟೀಕಿಸಿದರೆ ಓಡಿ ಹೋಗುತ್ತೇನೆ ಎಂದುಕೊಂಡಿರಾ?’ – ಕರೂರಿನಲ್ಲಿ ವಿಜಯ್ ವಾಗ್ದಾಳಿ

2025ರ ಕರೂರು ದುರಂತಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೂರಿನಲ್ಲಿ ತಾವು ನಡೆಸಿದ ರ್ಯಾಲಿಯ ವೇಳೆ ಪೊಲೀಸರನ್ನು ನಂಬಿದ್ದು ತಮ್ಮ ದೊಡ್ಡ ತಪ್ಪಾಗಿತ್ತು ಎಂದು ವಿಜಯ್ ಹೇಳಿದ್ದಾರೆ. ನಾಮಕ್ಕಲ್‌ನಲ್ಲಿ ಸಭೆ ಮುಗಿಸಿ ಕರೂರಿಗೆ ಬರುತ್ತಿದ್ದಾಗ ಅಲ್ಲಿನ ನೈಜ ಪರಿಸ್ಥಿತಿಯನ್ನು ಪೊಲೀಸರು ತಿಳಿಸಲಿಲ್ಲ. ಮುಂಚಿತವಾಗಿ ಮಾಹಿತಿ ನೀಡಿದ್ದರೆ ಕಾರ್ಯಕ್ರಮವನ್ನೇ ರದ್ದುಗೊಳಿಸುತ್ತಿದ್ದೆ. ಈ ವಿಷಯದಲ್ಲಿ ನನಗೆ ಮೋಸವಾಗಿದೆ ಎಂದು ವಿಜಯ್ ಆರೋಪಿಸಿದರು. ಕರೂರಿನಲ್ಲಿ ವಿಜಯ್ ಮಾಡಿದ ಭಾಷಣ ಭಾವನಾತ್ಮಕವಾಗಿಯೂ, ಉತ್ಸಾಹಭರಿತವಾಗಿಯೂ ಇತ್ತು. “ಟಿವಿಯಲ್ಲಿ…

Read More

ಸಂಡೇ ಬಜಾರ್ ಪುನರಾರಂಭಕ್ಕೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ತೀವ್ರ

ಪಾಲಿಕೆ ಕಚೇರಿ ಎದುರು ಹಗಲು-ರಾತ್ರಿ ಧರಣಿ; ಆಯುಕ್ತರ ಕಚೇರಿಗೆ ಮುತ್ತಿಗೆ ಮಂಗಳೂರು, ಜು. 10: ಸಂಡೇ ಬಜಾರ್ (ಭಾನುವಾರದ ಮಾರುಕಟ್ಟೆ) ವ್ಯಾಪಾರಕ್ಕೆ ಮತ್ತೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ನಗರ ಪಾಲಿಕೆ ಕಚೇರಿ ಎದುರು ಆರಂಭಿಸಿರುವ ಹಗಲು-ರಾತ್ರಿ ಧರಣಿ ಸತ್ಯಾಗ್ರಹಕ್ಕೆ 24 ಗಂಟೆ ಕಳೆದರೂ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಳಿಕ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ…

Read More

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ವಿಫಲ: ಕೆಆರ್‌ಎಸ್ ಪಕ್ಷ ಆರೋಪ

ಉಡುಪಿ: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸರ್ಕಾರ ಪರಿಣಾಮಕಾರಿ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂದು ಕೆಆರ್‌ಎಸ್ ಪಕ್ಷದ ಉಡುಪಿ ಜಿಲ್ಲಾ ಉಸ್ತುವಾರಿ ವಿ.ಆರ್. ಮರಾಠೆ ಆರೋಪಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸಹಾಯವಾಣಿ ಆರಂಭಿಸುವುದಾಗಿ ಘೋಷಿಸಿದ್ದರೂ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಟೀಕಿಸಿದರು.ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಲು ವರ್ಗಾವಣೆ ದಂಧೆಯೇ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಹಣ ನೀಡಿ ಆಯಕಟ್ಟಿನ…

Read More

ಜು.12ರಂದು ಶ್ರೀ ಕೋರ‍್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು: ನಗರದ ಮಜಿಲ ಸೂಟರ್‌ಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಕೋರ‍್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಜುಲೈ 12ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಇತಿಹಾಸ ಹೊಂದಿರುವ ಈ ದೈವಸ್ಥಾನ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ದೈವದ ಅಪ್ಪಣೆಯಂತೆ ಊರ ಹತ್ತು ಸಮಸ್ತರು ಹಾಗೂ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಕದ್ರಿ ಶ್ರೀ…

Read More

ಪುತ್ತೂರು ವಿಧಾನಸಭಾ ಕ್ಷೇತ್ರ: ಪ್ರತೀ ಗ್ರಾಮಕ್ಕೊಂದು ಕೆಪಿಎಸ್ ಶಾಲೆ ಮಂಜೂರು ಮಾಡಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮಕ್ಕೊಂದರಂತೆ ಕೆಪಿಎಸ್ ಶಾಲೆಯನ್ನು ಮಂಜೂರುಗೊಳಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಶ್ಮಿ ಮಹೇಶ್ ರವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಇಲಾಖಾ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಈ ಮನವಿ ಸಲ್ಲಿಸಿದ್ದಾರೆ.ಗ್ರಾಮೀಣ ಭಾಗದ ಬಡ ಮಕ್ಕಳು ಗುಣ ಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಎಲ್ ಕೆ ಜಿ ಯಿಂದಲೇ…

Read More

ಅಂಬ್ಯುಲೆನ್ಸ್‌ಗೆ ದಾರಿ ಬಿಡುವ ವೇಳೆ ಸರಣಿ ಡಿಕ್ಕಿ; ಭಂಡಾರಿಬೆಟ್ಟಿನಲ್ಲಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿತು

ಬಂಟ್ವಾಳ: ಭಂಡಾರಿಬೆಟ್ಟು ಸಮೀಪ ಅಂಬ್ಯುಲೆನ್ಸ್ ವಾಹನಕ್ಕೆ ದಾರಿ ಬಿಡುವ ವೇಳೆ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ. ಮಾಹಿತಿಯ ಪ್ರಕಾರ, ಸೈರನ್ ಹಾಕಿಕೊಂಡು ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಪಿಕಪ್ ವಾಹನ ಹಾಗೂ ಕಾರಿನ ಚಾಲಕರು ತಮ್ಮ ವಾಹನಗಳ ವೇಗವನ್ನು ಕಡಿಮೆ ಮಾಡಿ ರಸ್ತೆ ಬದಿಗೆ ಸರಿಯಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್…

Read More

ಶ್ರೀ ಗುರು ಚರಣಾಮೃತ’ ಹಾಗೂ ರೋಹಿದಾಸ್ ಬಂಗೇರ ವ್ಯಕ್ತಿ ಪರಿಚಯ ಕೃತಿ ಲೋಕಾರ್ಪಣೆ

ಮಂಗಳೂರು: ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಸಂಜೀವ ಕೆ. ಅವರ ರಚನೆಯ ‘ಶ್ರೀ ಗುರು ಚರಣಾಮೃತ’ ಹಾಗೂ ‘ತೀಯಾ ಕುಲ ತಿಲಕ ಮಹಾದಾನಿ ರೋಹಿದಾಸ್ ಬಂಗೇರ’ ಅವರ ವ್ಯಕ್ತಿ ಪರಿಚಯ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈನ ಸಮಾಜಸೇವಕ ಶಂಕರ ಸುವರ್ಣ, ಉದ್ಯಮಿ ಗೋವಿಂದ ಮಂಜೇಶ್ವರ ಹಾಗೂ ಅಮೃತ…

Read More
error: Content is protected !!