ಹಾಡು ಹಗಲೇ ಯುವಕನ ಅಪಹರಣ

ಕಾಸರಗೋಡು : ನಗರದಲ್ಲಿ ಹಾಡುಹಗಲೇ ಯುವಕನೊಬ್ಬನನ್ನು ಅಪಹರಣಗೈದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಕರಂದಕ್ಕಾಡು ಪ್ರದೇಶದ ಪ್ರಸಿದ್ಧ ಹೋಟೆಲಿನ ಸಮೀಪ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ನೋಂದಣಿ ಹೊಂದಿರುವ ಕಾರಿನಲ್ಲಿ ಬಂದ ತಂಡವು ಯುವಕನನ್ನು ಅಪಹರಿಸಿಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿಯಂತೆ, ಎಪಿ 40 ಇ ಯು1277 ಸಂಖ್ಯೆಯ ಆಂಧ್ರ ನೋಂದಣಿ ಕಾರನ್ನು ಅಪಹರಣಕ್ಕೆ ಬಳಸಲಾಗಿದೆ. ಅಪಹರಣಕ್ಕೊಳಗಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.ಘಟನೆಯ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲಾ…

Read More

ನ್ಯೂ ಇಯರ್ ಹಿನ್ನೆಲೆ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಮಾರ್ಗಸೂಚಿ ಪ್ರಕಟ ಮಾಡಿದ ಮಂಗಳೂರು ನಗರ ಪೊಲೀಸರು

ಮಂಗಳೂರು:ಹೊಸ ವರ್ಷದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆ ಮಂಗಳೂರು ನಗರ ಪೊಲೀಸರು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.ಹೊಸ ವರ್ಷಾಚರಣೆಯನ್ನು ಆಯೋಜನೆ ಮಾಡಲಾಗುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ಮತ್ತು ಇತರ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರುಗಳ ಕಛೇರಿಯಿಂದ ಕಡ್ಡಾಯವಾಗಿ ಪೂರ್ವ ಅನುಮತಿ ಪಡೆಯಬೇಕು. ಈ ಅರ್ಜಿಗಳನ್ನು ಡಿಸೆಂಬರ್ 23 ರಂದು ಸಂಜೆ 5:00 ಗಂಟೆಯ ಒಳಗಾಗಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ…

Read More

ಕನ್ನಡ ಭವನದ “ಕನ್ನಡದ ನಡಿಗೆ -ಶಾಲೆಯ ಕಡೆಗೆ “ಶೀರ್ಷಿಕೆಯೇ ಮನ ಮುಟ್ಟುವಂತಹದ್ದು -ಡಾ. ನೆಗಳಗುಳಿ

ಮಂಗಳೂರು :ಎಳೆಯರಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ, ಸಾಹಿತ್ಯಾಭಿಮಾನ ಮೂಡಿಸಬೇಕಾದದ್ದು ಕಾಲಘಟ್ಟದ ಅನಿವಾರ್ಯ. ಈ ನಿಟ್ಟಿನಲ್ಲಿ ಕನ್ನಡ ಭವನ ದ. ಕ. ಜಿಲ್ಲಾ ಘಟಕದ ವಿನೂತನ ಪ್ರಯೋಗ “ಕನ್ನಡದ ನಡಿಗೆ -ಶಾಲೆಯ ಕಡೆಗೆ “ಎಂಬ ಏಕ ದಿನ ಸಾಹಿತ್ಯ ಅಭಿಯಾನ ಪ್ರಾಯೋಗಿಕ ಹಾಗೂ ಅನುಕರಣೀಯ ಎಂದು ಮಂಗಳೂರಿನ ಹಿರಿಯ ವೈದ್ಯ ಗಝಲ್ ಕವಿ ಸಾಹಿತಿ ಡಾ. ಸುರೇಶ್ ನೆಗಳಗುಳಿ ಅಭಿಪ್ರಾಯ ಪಟ್ಟರು. ಇವರು ಮಂಗಳೂರಿನ ಕ್ರಾಸ್ತಿಯ ಪ್ರೌಢ ಶಾಲೆ ಜೆಪ್ಪು ಇಲ್ಲಿನ ಸಭಾಂಗಣದಲ್ಲಿ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ…

Read More

ಕರಾವಳಿ ಪ್ರದೇಶದ ಸಾರ್ವಜನಿಕರು ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸದನದಲ್ಲಿ ಗಮನ ಸೆಳೆದ ಎಂ ಎಲ್ ಸಿ ಕಿಶೋರ್ ಕುಮಾರ್ ಪುತ್ತೂರು

ಬೆಳಗಾವಿ: ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಕರಾವಳಿ ಪ್ರದೇಶದ ಸಾರ್ವಜನಿಕರು ಭೂ ಅಭಿವೃದ್ಧಿ ಹಾಗೂ ಕಟ್ಟಡ ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು. ಶಾಸಕರು ಮಾತನಾಡುತ್ತಾ, ರಾಜ್ಯದ ಕರಾವಳಿ ಗ್ರಾಮೀಣ ಭಾಗದ ಒಬ್ಬ ಸಾಮಾನ್ಯ ನಾಗರಿಕನು ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾದಾಗ, ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯುವ ಪ್ರಕ್ರಿಯೆಗಳು ಅತ್ಯಂತ ಜಟಿಲವಾಗಿದ್ದು,…

Read More

ಜೀವ ರಕ್ಷಣೆಯ ಪಾಠ: ಅಗ್ನಿಶಾಮಕ ಠಾಣೆಗೆ ನಂದಗೋಕುಲದ ಮಕ್ಕಳು

ಮಂಗಳೂರು:ಮಕ್ಕಳಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಮೂಡಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಜೀವ ಮತ್ತು ಆಸ್ತಿಯನ್ನು ರಕ್ಷಿಸುವ ಅಗ್ನಿಶಾಮಕ ದಳದವರ ಮಹತ್ವದ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಕೆನರಾ ನಂದಗೋಕುಲ ಶಾಲೆ ಕೋಡಿಯಾಲ್ ಬೈಲ್ ಹಾಗೂ ಪದವಿನಂಗಡಿ ಶಾಖೆಗಳ ಮಕ್ಕಳು ಶೈಕ್ಷಣಿಕ ಕ್ಷೇತ್ರಪ್ರವಾಸದ ಅಂಗವಾಗಿ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದರು . ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅಗ್ನಿಶಾಮಕ ದಳದವರ ಕರ್ತವ್ಯಗಳು, ಅಗ್ನಿ ಸುರಕ್ಷತಾ ಸಾಧನಗಳು, ಅಗ್ನಿಶಾಮಕ ಹಾಗೂ ರಕ್ಷಣಾ ವಾಹನಗಳ ಕಾರ್ಯವಿಧಾನವನ್ನು ವಿವರಿಸಿದರು. ಬೆಂಕಿಯನ್ನು…

Read More

ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟ ಅನುಭವಿಸಿದ ಕುಟುಂಬ ,ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ವತಿಯಿಂದ ಸಾಂತ್ವನ

ಮಂಜೇಶ್ವರ: ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ಮಾಡ ಮಂಜೇಶ್ವರ ಇದರ ವತಿಯಿಂದ ಬೇಟಿ ನೀಡಿ ಸಾಂತ್ವನ ನೀಡಲಾಯಿತು. ಈ ಸಂದರ್ಭದಲ್ಲಿ 4 ಕಿಟ್ ಗಳನ್ನು ಹಾಗೂ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ ಇವುಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪೂಜ್ಯ ಗುರುಗಳಾದ ಶ್ರೀ ರಾಜ ಬೆಳ್ಚಪ್ಪಾಡರು, ಹರೀಶ್ ಮೇಘ…

Read More

‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹ .. !

ನವದೆಹಲಿ: ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ.”ನ್ಯಾಷನಲ್ ಹೆರಾಲ್ಡ್ ಪ್ರಕರಣವು ರಾಜಕೀಯ ಸೇಡಿನಿಂದ ನಡೆಸಲ್ಪಟ್ಟಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸುವ ಪಕ್ಷಪಾತದ ಉದ್ದೇಶದಿಂದ ಈ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ…

Read More

ಮತ್ತೆ ‘ಧರ್ಮ’ದೇಟು . .. ! ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ, ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ಆರೋಪ… !

ಬೆಳ್ತಂಗಡಿ:ಸಂತೆಕಟ್ಟೆ ಬಳಿಯ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮೂವರು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ರಜೆ ಹಾಕಿ, ಮಧ್ಯಾಹ್ನದ ಬಳಿಕ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಬಂದಿದ್ದರು. ಸಂತೆ ವೀಕ್ಷಿಸಿದ ನಂತರ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ಪಕ್ಕದಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದ…

Read More

ಅಕ್ರಮ ಎಂಡಿಎಂಎ ಸಾಗಾಟ ವೇಳೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ .. ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ನ ಬೆನ್ನೆಟ್ಟಿ ಹಿಡಿದ ಖಾಕಿ … ! ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ .. !

ಮೂಡುಬಿದಿರೆ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಕೊಡಂಗಲ್ಲು ಎಂಬಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ. ಬಂಧಿತನನ್ನು ಕಲ್ಲಡ್ಕ ನಿವಾಸಿ ತೌಸೀಫ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ‌ ರೂ.‌ಮೌಲ್ಯದ ಕಾರು, ಈತನ ಕಾರಿನಲ್ಲಿ ಪತ್ತೆಯಾಗಿದ್ದ ತಲವಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು – ಮಹಾವೀರ…

Read More

ಕೊಂಕಣಿ ಸಾಹಿತಿ, ಲೇಖಕ ಜೆ.ಎಫ್. ಡಿಸೋಜಾರ 18 ನೇ ಕೃತಿ ಬಿಡುಗಡೆ … !

ಮಂಗಳೂರು:ಕೊಂಕಣಿ ಸಾಹಿತಿ, ಲೇಖಕ ಜೆ.ಎಫ್. ಡಿಸೋಜಾರ 18ನೆ ಕಥೆ ಪುಸ್ತಕ ‘ಭಾಂಗಾರಾಚೊ ಕೊಳ್ಸೊ’ ‘ (ಬಂಗಾರದ ಗಡಿಗೆ) ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಾಹಿತಿ ರೊನಾಲ್ಡ್ ರೋಚ್ ಕಾಸ್ಸಿಯಾ ಅವರು ಬುಧವಾರ ಬಿಡುಗಡೆಗೊಳಿಸಿದರು. ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೆ.ಎಫ್. ಡಿಸೋಜಾ, ಮಕ್ಕಳ ಕಥೆಗಳು, ಇತರ ಕಥೆ, ಚುಟುಕುಗಳ ಮೂಲಕ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. 2004ರಲ್ಲಿ ಇವರ ಭಾಂಗಾರಾಚಿ ಮಾಸ್ಲಿ ಕೊಂಕಣಿ ಮಕ್ಕಳ ಕಥೆಗಳ ಪ್ರಥಮ ಆವೃತ್ತಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ…

Read More
error: Content is protected !!