ಐಪಿಎಲ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಆರ್.ಸಿ ಬಿ

ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಚರಿತೆಯ 18ವರ್ಷಗಳ ಕಾಯುವಿಕೆಗೆ ಕೊನೆಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಾಲಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. “ಈ ಸಲ ಕಪ್ ನಮ್ದೇ ” ಎಂಬ ಭರವಸೆಯ ಮಾತು ಪೊಳ್ಳಾಗಲಿಲ್ಲ. ಐಪಿಎಲ್ ಸೀಸನ್ -18ರ ಕಿರೀಟವನ್ನು ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ವೀರೋಚಿತವಾಗಿ ಗೆದ್ದುಕೊಂಡಿದೆ.


ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ನ ಕೆಚ್ಚೆದೆಯ ಹೋರಾಟವನ್ನು ನಿಷ್ಕ್ರಿಯಗೊಳಿಸಿದ ಟೀಂ ಬೆಂಗಳೂರು ಪ್ರಪ್ರಥಮ ಬಾರಿಗೆ ಐಪಿಎಲ್ ಕಿರೀಟ ಗೆದ್ದುಕೊಂಡಿದೆ. ಕನ್ನಡ ನಾಡೆಲ್ಲಾ ಸಂಭ್ರಮಿಸುತ್ತಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ ನಿಗದಿತ 20ಒವರಿನಲಿ 190ರನ್ ಗಳಿಸಿತು. ಪ್ರತ್ಯುತ್ತರದ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಇಲೆವನ್ 20ಒವರಿನಲ್ಲಿ ಏಳು ವಿಕೆಟಿಗೆ 184ರನ್ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲು ಕಂಡಿತು.
ಆರ್.ಸಿ.ಬಿ ಗೆಲುವಿನಿಂದ ನಾಡಿನಾದ್ಯಂತ ತಂಡದ ಅಭಿಮಾನಿಗಳು ಆಟದ ಗೆಲುವಿಗೆ ಮೊದಲೇ ಸಂಭ್ರಮ ಆರಂಭಿಸಿದ್ದರು. ಈ ಗೆಲುವು ಕಿಂಗ್ ಕೊಹ್ಲಿ ಗೆ ಅರ್ಪಿತವೆಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!