ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ: ದೋಹಾ ಡೈಮಂಡ್ ಲೀಗ್ ನಲ್ಲಿ ಸ್ಟಾರ್ ಜಾವೆಲಿನ್ ಪಟು ಐತಿಹಾಸಿಕ ಸಾಧನೆ

ವಿಶ್ವದಲ್ಲಿ ಕೇವಲ 25 ಮಂದಿ ಮಾತ್ರ ಜಾವೆಲಿನ್ ಎಸೆತದಲ್ಲಿ 90 ಮೀಟರ್ ಗಿಂತ ದೂರ ಎಸೆದಿದ್ದಾರೆ. ಅಂತಹ ಅಪರೂಪದ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಇದೀಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 90 ಮೀಟರ್ ಗಡಿ ದಾಟಿ ಸಾಧನೆ ಮಾಡಿದರು. ಆದರೂ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತರಾಗಬೇಕಾಯಿತು.

 ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ಎಸೆದು ಪ್ರಥಮ ಸ್ಥಾನ ಪಡೆದರು. ಭಾರತದ ಕಿಶೋರ್ ಜೆನಾ 8ನೇ ಸ್ಥಾನ ಪಡೆದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ನೀರಜ್ ಯಾವುದೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಕ್ಕಿಂತ ಕೆಳಗೆ ಬಂದಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

ಭಾರತದ ನೀರಜ್ ಚೋಪ್ರಾ ಅವರು 90 ಮೀಟರ್ ಗಿಂತ ದೂರ ಜಾವೆಲಿನ್ ಎಸೆವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಜೀವನದ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಶುಕ್ರವಾರ (ಮೇ 16) ರಾತ್ರಿ ಸುಹೈಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಅವರು ಕೊನೆಯ ಎಸೆತದಲ್ಲಿ 91.06 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು. ಹೀಗಾಗಿ 90.23 ಮೀಟರ್ ದೂರ ಎಸೆದಿದ್ದ ನೀರಜ್ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!