ಬೇಕಾಗುವ ಪದಾರ್ಥಗಳು
ಎಣ್ಣೆ- ಸ್ವಲ್ಪ – ಜೀರಿಗೆ- ಸ್ವಲ್ಪ – ಸಾಸಿವೆ- ಸ್ವಲ್ಪ – ಕರಿಬೇವು- ಸ್ವಲ್ಪ ಈರುಳ್ಳಿ – 4 -ಟೊಮೆಟೋ- 1 – ಅರಶಿಣ ಪುಡಿ- ಸ್ವಲ್ಪ – ಹಸಿ ಮೆಣಸಿನಕಾಯಿ- 5 ಕೊತ್ತಂಬರಿ ಸೊಪ್ಪು- ಸ್ವಲ್ಪ -ತೆಂಗಿನ ತುರಿ- ಸ್ವಲ್ಪ -ಉಪ್ಪು- ರುಚಿಗೆ ತಕ್ಕಷ್ಟು
* ಮೊದಲು ಬಾಣಲೆಗೆ ಎಣ್ಣೆ ಹಾಕಿಕೊಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ ಹಾಕಿ ನಂತರ ಕರಿಬೇವು ಹಾಕಿ ಕೆಂಪಗೆ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಸ್ಲೈಸ್ ಮಾಡಿಕೊಂಡಿರುವ ಈರುಳ್ಳಿ, ಟೊಮೆಟೋ, ಹಸಿಮೆಣಸಿನ ಕಾಯಿ, ಉಪ್ಪು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ.
*ಬಳಿಕ ಅರಶಿನ ಪುಡಿ ಕೂಡ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತಳ ಹಿಡಿಯದಂತೆ ಕೈಯಾಡಿಸುತ್ತಿರಿ. 2 ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಬೇಕು.
*3 ನಿಮಿಷದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಹಾಗೂ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿದರೆ ಈರುಳ್ಳಿ ಪಲ್ಯ ಸವಿಯಲು ಸಿದ್ಧ.