ಪ್ರೇಮಮಯಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಮೂಲಾಧಾರವಾದ ‘ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ’ ಹೆಸರಿನ ರಥಯಾತ್ರೆ ದೇಶಾದ್ಯಂತ ಸಂಚರಿಸುತ್ತಿದ್ದು . ಇದರ ಭಾಗವಾಗಿ ರಥಯಾತ್ರೆಯು ಮಾ.7ರಿಂದ 14ರವರೆಗೆ ದ.ಕ., ಕಾಸರಗೋಡು , ಉಡುಪಿ ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ, ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ‘ಪ್ರೇಮ ಪ್ರವಾಹಿನಿ’ ರಥಯಾತ್ರೆಯ ದಕ್ಷಿಣ ಭಾರತ ವಿಭಾಗದ ರಥವು ತೆಲಂಗಾಣ ಮೂಲಕ ಕರ್ನಾಟಕ ಪ್ರವೇಶಿಸಿದ್ದು, ಮಾ.7ರಂದು ಗುಂಡ್ಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದೆ. ಮಾ.12ರಂದು ಮಂಗಳೂರು ಮಣ್ಣಗುಡ್ಡ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಕ್ಕೆ ರಥ ಆಗಮಿಸಲಿದ್ದು, ದಿವ್ಯ ದರ್ಶನ ಹಾಗೂ ಪಾದುಕೆ ಸ್ಪರ್ಶಕ್ಕೆ ಅವಕಾಶವಿದೆ. ಮಾ.13ರಂದು ಪುರಭವನದಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.14ರಂದು ಉಡುಪಿ ಜಿಲ್ಲೆಗೆ ರಥ ತೆರಳಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಚಂದ್ರಶೇಖರ ನಾಯಕ್, ನಿರಂಜನ್ ಹೆಬ್ಬಾರ್, ದೇವಾನಂದ ರೈ , ದುರ್ಗಾಪ್ರಸಾದ್, ಆನಂದ ರೈ ಉಪಸ್ಥಿತರಿದ್ದರು .