ಮಂಗಳೂರು: ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದುಕೊಂಡರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನ ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದವರ ಆಶ್ರಯದಲ್ಲಿ “ವಿಶ್ವ ಕುಂದಾಪ್ರ ದಿನಾಚರಣೆಯು ಆಗಸ್ಟ್ ೩ ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 7ರ ತನಕ ನಗರದ ಉರ್ವ ಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಆಯೋಜನಾ ಸಮಿತಿಯ ಸಂಚಾಲಕಾರದ ಸಂತೋಷ್ ಶೆಟ್ಟಿ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಸುದ್ದಿಗಾರೊಂದಿಗೆ ಮಾತನಾಡಿಯಾದ ಅವರು , ಆಷಾಢ ಮಾಸದ ಒಂದು ದಿನದಲ್ಲಿ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ . ಈ ಆಚರಣೆಯ ಮೂಲ ಉದ್ದೇಶ ಕುಂದಾಪುರದ ಮೂಲ ಭಾಷೆಯ ಆಚಾರ ವಿಚಾರಗಳ ಮತ್ತು ಅದರ ಆಸ್ಥಿತೆಯ ಮಹತ್ವವವನ್ನು ಮುಂದಿನ ಪೀಳೀಗೆಗೆ ತಿಳಿಸುವ ಕಾರ್ಯಕ್ರಮ ಇದಾಗಿದೆ . ವಿವಿಧ ಗಣ್ಯರ ಸಮ್ಮುಖದಲ್ಲಿ ಗ್ರಾಮೀಣ ಸೊಗಡಿನೊಂದಿಗೆ, ಕಾರ್ಯಕ್ರಮವು ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಮಾಲಾ ಎಸ್. ಶೆಟ್ಟಿ , ಕಾರ್ಯದರ್ಶಿಯಾದ ಲಿಖಿತ ಶೆಟ್ಟಿ , ಗೌರವಾಧ್ಯಕ್ಷರಾದ ಜಿ.ಕೆ. ಶೆಟ್ಟಿ , ಕೋಶಾಧಿಕಾರಿ ಶರತ್ ಆಚಾರ್ಯ ಉಪಸ್ಥಿತತರಿದ್ದರು.