ಕರ್ನಾಟಕದಲ್ಲಿ ಕೆ ಎಸ್ ಆರ್ ಟಿ ಸಿ ಬಂದ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಸರಕಾರೀ ಬಸ್ ಸಂಚಾರ

ಮಂಗಳೂರು: ಕರ್ನಾಟಕದಲ್ಲಿ ಕೆ ಎಸ್ ಆರ್ ಟಿ ಸಿ ಬಂದ್ ಬಿಸಿ ಏರುತ್ತಿತ್ತದರು ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಸರಕಾರೀ ಬಸ್ ಸಂಚಾರ ನಡೆಸುತ್ತಿದೆ . ಹಿಂಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಯನ್ನು ಮುಂದಿಟ್ಟು ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳ ಸುಮಾರು ಒಂದುವರೇ ಲಕ್ಷ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು . ಕರ್ನಾಟಕದ ಇತ್ತರೆ ಭಾಗಗಳಿಗೆ ಪ್ರತಿಭಟನೆಯ ಕಾವು ಮುಟ್ಟಿದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ಸ್ಗಳು ಸುಗಮ ಸಂಚಾರ ನಡೆಸುತ್ತಿದೆ .

ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳಿಂದ ಇಂದು ಮುಂಜಾನೆ ೬ ಗಂಟೆಯಿಂದ ಬಂದ್ಗೆ ಕರೆ ನೀಡಲಾಗಿತ್ತಾದರೂ ಅದರ ಬಿಸಿ ಮಂಗಳೂರು ನಗರಕ್ಕೆ ತಟ್ಟಲಿಲ್ಲ . ಮಂಗಳೂರು ನಾಗರದಾದಂತ್ಯ ಬಸ್ಸ್ ಗಳು ಯಥಾವತ್ತಾಗಿ ಸಂಚರಿಸುತ್ತಾ ಇದ್ದು ಪ್ರಯಾಣಿಕರು ಆತಂಕ ಇಲ್ಲದ್ದೆ ಪ್ರಯಾಣವನ್ನು ಮಾಡ್ತಾ ಇದ್ದಾರೆ . ರಾಜ್ಯ ಸರಕಾರಿ ಬಸ್ ಸಂಚಾರದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬರದ ಕಾರಣ ಬಸ್ಸ್ ಬಂದ್ ಗೆ ಮಂಗಳೂರು ವಿಭಾಗವು ಬೆಂಬಲ ಸೂಚಿಸಿಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತೆ .

ಸ್ಟೇಟ್ ಬ್ಯಾಂಕ್ ಬಸ್ಸ್ ನಿಲ್ದಾಣದಿಂದ ಪುತ್ತೂರು, ಧರ್ಮಸ್ಥಳ, ಬಿಸಿ ರೋಡ್ , ವಿಟ್ಲಾ ಭಾಗಗಳಿಗೆ ಬಸ್ ಸಂಚಾರ ದಿನನಿತ್ಯದಂತಿತ್ತು . ಕರ್ನಾಟ ಸರಕಾರದ ಮುಂದೆ ಸಾರಿಗೆ ನೌಕರರ ಪ್ರಮುಖ ಬೇಡಿಕೆ ಎಂದರೆ , 01-01-2024ರಿಂದ ನೌಕರರ ವೇತನ ಪರಿಷ್ಕರಣೆ ಆಗಬೇಕು , ನೌಕರರ 38 ತಿಂಗಳ ಹಿಂಬಾಕಿಯನ್ನು ಪಾವತಿ ಮಾಡಬೇಕು , ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಬೇಕು , ಸಾರಿಗೆ ನೌಕರರಿಗೆ ಪ್ರತಿ 4 ವರ್ಷಕೊಮ್ಮೆ ವೇತನ ಪರಿಷ್ಕರಣೆ , ಇನ್ನು ಮುಂದೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು , ಈ ಹಿಂದೆ ಮುಷ್ಕರದಲ್ಲಿ ಭಾಗಿಯಾದ ನೌಕರರ ವಜಾ ವಾಪಾಸ್ , ನೌಕರರ ಕುಟುಂಬಸ್ಥರ ಮೇಲಿನ ಸುಳ್ಳು ಕೇಸ್​ ವಾಪಾಸ್ ಪಡಿಬೇಕು , ನಗದು ರಹಿತ ವೈದ್ಯಕೀಯ ಸೌಲಭ್ಯ, ಉತ್ತಮ ಕ್ಯಾಂಟೀನ್ ವ್ಯವಸ್ಥೆ , ವಿದ್ಯುತ್‌ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು , ವಿದ್ಯುತ್‌ ಬಸ್‌ಗಳ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಬಾರದು ಈ ರೀತಿಯ ಬೇಡಿಕೆಯನ್ನು ಇಟ್ಟು ಸಾರಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ . . ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ .

ದಕ್ಷಿಣ ಕನ್ನಡ ಜಿಲ್ಲೆಗೆ ತಟ್ಟದ ಸರಕಾರಿ ಬಸ್ಸ್ ಮುಷ್ಕರ
ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳಿಂದ ಬಂದ್ಗೆ ಕರೆ
ಗ್ರಾಮಾಂತರ ಸಾರಿಗೆ , ನಗರ ಸಾರಿಗೆ ಎಂದಿನಂತೆ
ಸಹಜ ಸ್ಥಿತಿಯಲ್ಲಿ ಸ್ಟೇಟ್ ಬ್ಯಾಂಕ್ ಬಸ್ಸ್ ನಿಲ್ದಾಣ

SHARE
Loading spinner

Leave a Reply

Your email address will not be published. Required fields are marked *

error: Content is protected !!