ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್‌ನನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಈ ಮಧ್ಯೆ ಬುರುಡೆ ಕಥೆಯನ್ನು ಕೇರಳಕ್ಕೆ ಹಬ್ಬಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್‌ಗೂ ಎಸ್‌ಐಟಿ ನೋಟಿಸ್ ನೀಡಿದೆ.
ಬುರುಡೆ ಕೇಸ್ನಲ್ಲಿ ಕೇರಳ ಮೂಲದ ಯೂಟ್ಯೂಬರ್ ಮನಾಫ್ಗೆ ಎಸ್ಐಟಿ ನೊಟೀಸ್ ನೀಟಿದೆ. ಬುರುಡೆ ಪ್ರಕರಣ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್ ನಲ್ಲಿ ಈ ಮುನಾಫ್ ನಾನಾ ಕಥೆಗಳನ್ನು ಕಟ್ಟಿದ್ದ ಎನ್ನಲಾಗ್ತಿದೆ. ಜಯಂತ್ ಬುರುಡೆ ತೆಗೆಯುವ ವಿಡಿಯೋವನ್ನು ಈತ ವೈರಲ್ ಮಾಡಿದ್ದ ಎನ್ನಲಾಗ್ತಿದೆ. ಈತನ ಬಳಿ ಅಸಲಿ ಬುರುಡೆ ವಿಡಿಯೋಗಳಿದ್ಯಾ ಎನ್ನುವ ಅನುಮಾನ ಕೂಡ ಮೂಡಿದೆ.