ಪೈವಳಿಕೆ : ಬಿಜೆಪಿ ಸ್ಥಳೀಯ ಚುನಾವಣೆ ಯಲ್ಲಿ ಗೆಲ್ಲಬೇಕಾದದ್ದು ನಾಡಿನ ಜನತೆಯ ಆಗ್ರಹ, ದೇಶದ ಪ್ರಗತಿಯಲ್ಲಿ ನಮ್ಮ ಗ್ರಾಮದ ಕೊಡುಗೆಗಳು ಅಗತ್ಯ ಅದಕಾಗಿ ಬಿಜೆಪಿ ಸ್ಥಳೀಯ ವಾರ್ಡ್ ಗಳಲ್ಲಿ ಗೆಲ್ಲಬೇಕು.
ಆಗ ದೇಶ ಪ್ರಗತಿ ವಾರ್ಡ್ ಮಟ್ಟದಲ್ಲು ಕಾಣಬವುದು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್ ಮಾಧು ಹೇಳಿದರು.
ಪೈವಳಿಕೆ ಪಂಚಾಯತ್ ಚೇರಲ್ ವಾರ್ಡ್ ಸಮಾವೇಶ ಉದ್ಘಾಟಿಸಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..
ಶ್ರೀಕಾಂತ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ sc ಮೋರ್ಚಾ ಉಪಾಧ್ಯಕ್ಷ ಎ ಕೆ ಕಯ್ಯರ್, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ವಾರ್ಡ್ ಸದಸ್ಯೆ ಪುಷ್ಪ ಲಕ್ಷ್ಮಿ, ಮಮತಾ ಉಪಸ್ಥಿತರಿದ್ದರು.ಸದಾಶಿವ ಚೇರಲ್ ಸ್ವಾಗತಿಸಿ ಗಣೇಶ ಪ್ರಸಾದ್ ನಾಯ್ಕ್ ವಂದಿಸಿದರು.