ಕನ್ನಡದ ಬಹುನಿರೀಕ್ಷಿತ ಸಿನೆಮಾ “ವಾದಿರಾಜ ವಾಲಗ ಮಂಡಳಿ”ಗೆ ಉರ್ವಾ ಮಾರಿಯಮ್ಮ ಸಾನಿಧ್ಯದಲ್ಲಿ ನಡೆಯಿತು ಸಂಭ್ರಮದ ಮುಹೂರ್ತ … !

ಮಂಗಳೂರು: ಕನ್ನಡದ ಬಹುನಿರೀಕ್ಷಿತ “ವಾದಿರಾಜ ವಾಲಗ ಮಂಡಳಿ” ಚಲನಚಿತ್ರಕ್ಕೆ ಮಂಗಳೂರಿನ ಉರ್ವಾ ಮಾರಿಯಮ್ಮನ ಸಾನಿಧ್ಯದಲ್ಲಿ ಶುಕ್ರವಾರ ಮುಹೂರ್ತ ನಡೆಯಿತು. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುವ ಈ ಚಿತ್ರದ ಚಿತ್ರೀಕರಣ 3. ಯಶಸ್ವಿಯಾಗಿ ನಡೆದು ಚಿತ್ರ ಜನಮೆಚ್ಚುಗೆ ಗಳಿಸಲಿ ಎಂಬ ನಿಟ್ಟಿನಲ್ಲಿ ಮಾರಿಯಮ್ಮ ದೇವಿಯ ಸಮ್ಮುಖದಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಯಿತು.

ಚಲನಚಿತ್ರದ ಅನ್ನು ದೇವಿಯ ಚರಣದಲ್ಲಿ ಇಟ್ಟು ಪೂಜೆ ಸಲ್ಲಿಸಿದ ಬಳಿಕ, ಅರ್ಚಕರು ಪ್ರಾರ್ಥನೆ ಸಲ್ಲಿಸಿದರು. ದೇಗುಲದ ಮುಂಭಾಗದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾ‌ರ್ ಅವರು ಕ್ಯಾಮರಾಗೆಸಂಭಾಷಣೆಯನ್ನು ಚಾಲನೆ ನೀಡುವ ಮೂಲಕ ಶೂಟಿಂಗೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ನಿರ್ಮಾಪಕ ಡಾ.ಎಂ.ಎಸ್.ರಾಜೇಂದ್ರ ಕುಮಾರ್, ‘ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರಕ್ಕೆ ಊರ್ವಾ ಮಾರಿಯಮ್ಮ ದೇವಸ್ಥಾನದಲ್ಲಿ ಮಹೂರ್ತವನ್ನು ಮಾಡಿದ್ದೇವೆ. ಕಲಾವಿದರಿಗೆ ವಿಶೇಷವಾದ ಗೌರವ, ಅವಕಾನವನ್ನು ಕೊಡಬೇಕು ಎಂಬ ದೃಷ್ಟಿಕೋನದಿಂದ ಕನ್ನಡ ಚಲನಚಿತ್ರವನ್ನು ನಾವು ಪ್ರಾರಂಭ ಮಾಡಿದ್ದೇವೆ. ಇದು ಸಂಪೂರ್ಣವಾಗಿ ಹಾಸ್ಯಭರಿತ ಕೌಟುಂಬಿಕ ಚಿತ್ರವಾಗಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಚಿಂತೆ ಇತ್ಯಾದಿ ಇರುವಾಗ ಹಾನ್ಯ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಈ ಆಶಯದೊಂದಿಗೆ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಯಶಸ್ವಿಯಾದ ಬಳಿಕ ಕನ್ನಡದ ಹಲವು ಕಲಾವಿದರಿಗೆ ಅವಕಾಶ ಕೊಡುವ ಉದ್ದೇಶವಿದೆ ಎಂದರು.

ಚಿತ್ರ ನಿರ್ದೇಶಕ ಶಶಿರಾಜ್ ರಾವ್ ಕಾವೂರು , ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಬೆಳವು ದೇವಿಪ್ರಸಾದ್ ಶೆಟ್ಟಿ, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಅಥರ್ವ ಪ್ರಕಾರ್, ಜಯಪ್ರಕಾಶ್ ತುಂಬೆ, ಚೇತನ್ ರೈ ಮಾಣಿ, ವೇನ್ಯ ಚೇತನ್ ರೈ ರಂಜನ್ ಬೋಳೂರು ಪುಷ್ಪರಾಜ್ ಬೋಳಾರ್, ಎಸ್.ಚಂದ್ರಶೇಖರನ್ ನಟ ನವೀನ್ ಡಿ. ಪಡೀಲ್, ರಂಗಭೂಮಿ ಕಲಾವಿದ ನಾಟಕಕಾರ ವಿಜಯ್ ಕುಮಾರ್ ಕೊಡಿಯಾಲ್‌ ಬೈಲ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಚಿತ್ರ ಕಲಾವಿದರು ಸಹಿತ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!