ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ವೃದ್ಧ ಮಹಿಳೆಯರ ಆಧಾರ್ ಅಳಿಕೆ: ಸ್ಪಷ್ಟನೆ ಇಲ್ಲದೆ ಅನುಮಾನಕ್ಕೆ ಎಡೆ — ಬಿ. ನವೀನ್ ಚಂದ್ರ ಪೂಜಾರಿ

ಮಂಗಳೂರು:ಕರ್ನಾಟಕ ರಾಜ್ಯದಾದ್ಯಂತ 12 ಲಕ್ಷಕ್ಕಿಂತಲೂ ಮೇಲ್ಪಟ್ಟು ವೃದ್ಧ ಮಹಿಳೆಯರ ಆಧಾರ್ ಕಾರ್ಡ್ ಅಳಿಸಿ ಹೋಗಿದ್ದು ಅಧಿಕಾರಿಗಳಲ್ಲಿ ಕಾರಣ ಕೇಳಿದಾಗ ಸರಿಯಾದ ಉತ್ತರವೂ ದೊರಕದೆ ಇರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷರಾದ ಬಿ ನವೀನ್ ಚಂದ್ರ ಪೂಜಾರಿ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ಸಮಸ್ಯೆಯ ಬಗ್ಗೆ ಈ ಹಿಂದೆ ಅಧಿಕಾರಿಗಳ ಗಮನವನ್ನು ಸೆಳೆಯಲಾಗಿತ್ತು. ಅರ್ಜಿಯನ್ನು ಡಿಸಿ ಆಫೀಸಿಯಲ್ಲಿ ಕೊಟ್ಟು ಆದಮೇಲೆ 45 ದಿನಗಳ ನಂತರ ಪರಿಶೀಲಿಸಲಾಗುವುದು ಎನ್ನುವ ಉತ್ತರವನ್ನು ನೀಡುತ್ತಾರೆ. ಇದು ಕಾನೂನುಬಾಹಿರವಾಗಿದ್ದು ಒಬ್ಬ ವ್ಯಕ್ತಿ ಜೀವಂತವಿರುವಾಗಲೇ ಅವರು ಮೃತಪಟ್ಟಿದ್ದಾರೆಂದು ಆಧಾರ್ ಕಾರ್ಡನ್ನು ಅಳಿಸಿ ಹಾಕಿರುವುದು ಇದು ಬಡವರ್ಗದ ಜನರಿಗೆ ಮಾಡಿರುವ ಅನ್ಯಾಯವಾಗಿದೆ ಎಂದರು.

ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪರ ಎಂದು ಹೇಳಿಕೊಂಡು ಬಡವರಿಗೆ ಸರಕಾರದಿಂದ ಸಿಗುವ ಸವಲತ್ತುಗಳಿಗೆ ಕೊಳ್ಳಿ ಇಟ್ಟಿರುತ್ತಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು ಕೂಡಲೇ ತಪ್ಪನ್ನು ಸರಿ ಮಾಡಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಸಾರ್ವಜನಿಕರಲ್ಲಿ ನನ್ನ ವಿನಂತಿ ಏನಂದರೆ ಕೂಡಲೇ ತಮ್ಮ ಆಧಾರ್ ಕಾರ್ಡುಗಳನ್ನು ಅಳಿಸಿ ಹೋಗಿದ್ದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು ಎಂದರು.ಈ ತಪ್ಪನ್ನು ಕೂಡಲೆ ಸರಿ ಮಾಡದಿದ್ದಲ್ಲಿ ರಾಜ್ಯಾದಾದ್ಯಂತ ಆಮ್ ಆದ್ಮ ಪಕ್ಷದ ಹಿಂದುಳಿದ ವರ್ಗದ ಘಟಕವು ಪ್ರತಿಭಟನೆ ಮಾಡವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸದಸ್ಯರಾದ ರವಿ ಪ್ರಸಾದ್, ಕುಶಲ್ ಕುಮಾರ್ ಕಟೀಲು , ಪಾಂಡುರಂಗ ಕೆ ಎಸ್, ಸಂದೀಪ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!