ಮಂಗಳೂರು ಕೊಡಿಯಾಲ್ ಗುತ್ತು ವೆಟ್ ವೆಲ್–ರಾಜಕಾಲುವೆ ಅವ್ಯವಸ್ಥೆ: ಸ್ಥಳೀಯರ ದೂರು ಆಲಿಸಿದ ಐವನ್ ಡಿಸೋಜಾ, ತಕ್ಷಣ ಕ್ರಮಕ್ಕೆ ಸೂಚನೆ

ಮಂಗಳೂರಿನ ಕೊಡಿಯಾಲ್ ಗುತ್ತು ಮಹಾನಗರ ಪಾಲಿಕೆಯ ವೆಟ್ ವೆಲ್ ಸ್ಥಾವರಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ರವರು ಸ್ಥಳೀಯರ ಮನವಿಯಂತೆ ಭೇಟಿ ನೀಡಿ ವೆಟ್ ವೆಲ್ ಹಾಗೂ ರಾಜಕಾಲುವೆ ಯಿಂದ ಉಂಟಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜೀವ ನದಿ ರಾಜಕಾಲುವೆಗೆ ಡ್ರೈನೇಜ್ ಮಲಿನ ನೀರು ಹರಿದು ನರಕ ದರ್ಶದ ಮಾರಕ ಅವ್ಯವಸ್ಥೆಯ ದರ್ಶನವನ್ನು ಇದು ಮಾಡುತ್ತಾ ಇದ್ದು ಇದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ. ದುರ್ವಾಸನೆ , ಕೊಳಚೆ ನೀರಿನಿಂದ ಸೊಳ್ಳೆಗಳ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಅಧಿಕಾರಿಗಳು ಸ್ಥಳೀಯರ ಜೊತೆಗೆ ಮಾತು ಕಥೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!