ಕಾಸರಗೋಡು: ಜಿಲ್ಲೆಯ ಎರಡೆಡೆ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಗಣನೀಯ ಪ್ರಮಾಣದ ಎಂಡಿಎಂಎ ಮಾದಕದ್ರವ್ಯದೊಂದಿಗೆ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ.

ಕರಂದಕ್ಕಾಡ್ನಲ್ಲಿ ವಿದ್ಯಾನಗರ ಎಸ್.ಐ ವಿಜಯನ್ ಮೇಲೋತ್ ಹಾಗೂ ಡ್ಯಾನ್ಸಾಫ್ ಪಡೆ ನಡೆಸಿದ ತಪಾಸಣೆ ವೇಳೆ ಸಂಶಯಾಸ್ಪದವಾಗಿ ವರ್ತಿಸಿದ ಪಳ್ಳಿಕ್ಕರೆಯ ಗೋಕುಲ್ ರಾಜೀವ್ (25) ಎಂಬಾತನನ್ನು ಬಂಧಿಸಿ, ಆತನ ಬ್ಯಾಗ್ನಲ್ಲಿದ್ದ 1.510 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದೆಡೆ, ನೀಲೇಶ್ವರ ಕೋಟಪುರಂ ಸೇತುವೆ ಬಳಿ ಎಸ್.ಐ ಸುಮೇಶ್ ಬಾಬು ನೇತೃತ್ವದ ತಂಡ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್ನಲ್ಲಿ 1.5 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ಹೊಸದುರ್ಗದ ಸಲಾಂ ಖಲೀಲ್ (41) ಮತ್ತು ಆಶಿಕ್ ಕೆ. (30) ಎಂಬವರನ್ನು ಬಂಧಿಸಲಾಗಿದೆ.
ಮಾದಕದ್ರವ್ಯ ಜಾಲದ ವಿರುದ್ಧ ಕಠಿಣ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.


