ಉಪ್ಪಳ: ಪರಂಬಳ ಕಯ್ಯಾರುವಿನಲ್ಲಿ ದುರ್ಗಾ ಶಕ್ತಿ ಕುಣಿತ ಭಜನಾ ತಂಡದ ಭಜನಾ ತರಬೇತಿ ಕಮ್ಮಟ ಸಮಾರೋಪ

ಉಪ್ಪಳ : ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ತಾಲೂಕು ಇದರ ಸಹಯೋಗದಲ್ಲಿ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭವು ಪರಂಬಳ ಕಯ್ಯಾರು ಶ್ರೀ ಭಾರತ ಮಾತ ಸೇವಾ ಟ್ರಸ್ಟಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು .ಸಭೆಯ ಅಧ್ಯಕ್ಷತೆ ಯನ್ನು ಶ್ರೀ ಸುರೇಶ್ ಶೆಟ್ಟಿ ಹೇರೂರು ಅಧ್ಯಕ್ಷರು ಭಜನಾ ತರಬೇತಿ ಕಮ್ಮಟ ಸಮಿತಿ ಪರಂಬಳ ಕಯ್ಯಾರು ಇವರು ವಹಿಸಿದರು .

ಧಾರ್ಮಿಕ ಉಪನ್ಯಾಸವನ್ನು ಡಾ. ಶ್ರೀ ಅರುಣ್ ಉಳ್ಳಾಲ್ ವಾಗ್ಮಿ ಉಪನ್ಯಾಸಕರು ಪ್ರಧಾನ ಸಂಚಾಲಕರು ಅಂಬಾವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು ಇವರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಾಹಾಲಿಂಗ ನಾಯ್ಕ್ ಅಮೈ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಶ್ರೀ ಪುನೀತ್ ರಾಜ್ ಕುಂಪಳ ದೇವಿ ಪಾತ್ರಿ ಶ್ರೀ ಅಧಿಶಕ್ತಿ ಚಾಮುಂಡೇಶ್ವರಿ ಮಂತ್ರ ದೇವತೆ ಸಾನಿಧ್ಯ ಲಕ್ಷ್ಮಿಗುಡ್ಡೆ ಕುಂಪಳ , ಡಾ. ಶ್ರೀ ವಿಜಯ ಪಂಡಿತ್ ಉಪ್ಪಳ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಂಬಾರು ಮಂಗಲ್ಪಾಡಿ , ಡಾ. ಶ್ರೀ ಹರೀಶ್ ಬೊಟ್ಟಾರಿ ಉದ್ಯಮಿ, ಕೊಡುಗೈದಾನಿ, ಶ್ರೀ ಜಯರಾಮ್ ನಾಯ್ಕ್ ಹೇರೂರು ರಾಷ್ಟ್ರೋತನ ಪರಿಷತ್ ಬೆಂಗಳೂರು, ಎ ಬಾಬು ನಾಯ್ಕ್ ಜಿಲ್ಲಾ ನಿರ್ದೇಶಕರು ದಕ್ಷಿಣ ಕನ್ನಡ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ ಸಿ ಟ್ರಸ್ಟ್, ಶ್ರೀ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಅಧ್ಯಕ್ಷರು ಜನ ಜಾಗ್ರತಿ ವೇದಿಕೆ ಮಂಜೇಶ್ವರ ,ಶ್ರೀ ಗಿರೀಶ್ ಕುಮಾರ್ ಅಧ್ಯಕ್ಷರು ಶ್ರೀ ಭಾರತ ಮಾತಾ ಸೇವಾ ಟ್ರಸ್ಟ್ ಹಾಗೂ ವಿಶ್ವಹಿಂದೂ ಪರಿಷತ್ ಪರಂಬಳ ಕಯ್ಯಾರು ಅತಿಥಿಗಳಾಗಿ ಭಾಗವಹಿಸಿದರು .

ಭಜನಾ ತರಬೇತಿ ಕಮ್ಮಟದ ಗೌರವ ಮಾರ್ಗದರ್ಶಕರಾದ ಶ್ರೀ ಅಶ್ವಿನ್ ಭಟ್ ಅಟಿಕುಕ್ಕೆ ಪ್ರಧಾನ ಅರ್ಚಕರು ಕಜೆ ಶ್ರೀ ಜನಾರ್ದನ ದೇವಸ್ಥಾನ ಕಯ್ಯಾರು, ಶ್ರೀ ಕಿರಣ್ ಕುಮಾರ್ ಕಯ್ಯಾರು ಪ್ರಧಾನ ಅರ್ಚಕರು ಅದಿಶಕ್ತಿ ಶ್ರೀ ಮಾಹಮ್ಮಯಿ ದೇವಸ್ಥಾನ ಪರಂಬಳ ಇವರು ಶುಭಸಂಸಾಸನೆ ಗೈದರು .

ಕುಂಬಳೆ ಅಭಕಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತಿ ಇದ್ದರು ದುರ್ಗಾ ಶಕ್ತಿ ಕುಣಿತ ಭಜನಾ ಸಮಿತಿಯ ಪ್ರಧಾನ ಸಂಚಾಲಕ ಸತೀಶ್ ಕುಮಾರ್ ಕಾಪು ಪ್ರಸ್ತಾವಿಸಿ ಸ್ವಾಗತಿಸಿದ ಕಾರ್ಯಕ್ರಮವನ್ನು ದುರ್ಗಾ ಶಕ್ತಿ ಭಜನಾ ಸಮಿತಿಯ ಸಂಚಾಲಕಿ ಸೌಮ್ಯ ಕಯ್ಯಾರು ದಾನ್ಯವಾದವಿತ್ತರು ಭಜನಾ ಸಮಿತಿಯ ಗೌರವ ಮಾರ್ಗಧರ್ಶಕಿ ಶ್ರೀಮತಿ ರಮ್ಯಾ ಸೀತಾಂಗೊಳಿ ಮತ್ತು ಭಜನಾ ಕಮ್ಮಟ ಸಮಿತಿಯ ಕಾರ್ಯಧರ್ಶಿ ತಿಲಕ ಕಯ್ಯಾರು ನೀರೂಪಿಸಿದರು 135 ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ತಾಳ ವಿತರಿಸಲಾಯಿತು

SHARE
Loading spinner

Leave a Reply

Your email address will not be published. Required fields are marked *

error: Content is protected !!