ಮಂಗಳೂರು :ಸುಳ್ಯ ಶಾಸಕಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ದಾಂಜಲಿ ಪೋಸ್ಟ್ ವಿಚಾರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.ಈ ವಿದ್ಯಮಾನವನ್ನು ಕಟುವಾಗಿ ಖಂಡಿಸಿರುವ ಶಾಸಕ ವೇದವ್ಯಾಸ್ ಕಾಮತ್ ಖಂಡನೆ ಪೋಸ್ಟ್ ಮಾಡಿದವನನ್ನ ಬಂಧಿಸಲು ಆಗ್ರಹಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ವಿಕೃತಿಯ ಮನಸಿನ ವ್ಯಕ್ತಿ ಶಾಸಕಿಗೆ ಅವಮಾನ ಮಾಡಿದ್ದಾನೆ.ಪರಿಶಿಷ್ಟ ಜಾತಿಗೆ ಸೇರಿದ ಒಂದು ಮಹಿಳೆಗೆ ಈ ರೀತಿ ಮಾಡಿರುವುದನ್ನು ಸಮಾಜ ಒಪ್ಪುವುದಿಲ್ಲ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಗೌರವ ಕೊಡುತೇವೆ ಎನ್ನುತ್ತಾರೆ. ಇವತ್ತು ಸಂವಿಧಾನದ ಅಡಿಯಲ್ಲಿ ಜನ ಪ್ರತಿನಿದಿಯಾಗಿ ಆಯ್ಕೆ ಆಗಿದ್ದವರಿಗೆ ಆಗಿರುವ ಅವಮಾನವನ್ನು ಕಾಂಗ್ರೆಸ್ ಇನ್ನೂ ಯಾಕೆ ಖಂಡಿಸಿಲ್ಲ ಎಂದು ಕಾಮತ್ ಪ್ರಶ್ನಿಸಿದ್ದಾರೆ.