
ಕಾಸರಗೋಡು: ಪನತ್ತಡಿ ನಿವಾಸಿ ಹಾಗೂ ಗೆಳತಿಯನ್ನು ವಸತಿಗೃಹದ ಕೋಣೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿ, ಚಿನ್ನ ಹಾಗೂ ನಗದು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ನಗರ ಠಾಣೆ ಪೊಲೀಸರು 17 ವರ್ಷದ ಬಾಲಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಮಧೂರು ಎಸ್.ಪಿ ನಗರ ಕ್ವಾರ್ಟರ್ಸ್ ನಿವಾಸಿ ಸಾಬಿತ್ (30), ನಾಯ್ಮಾರ್ ಮೂಲದ ಅಕ್ಕರಪಳ್ಳ ನಿವಾಸಿ ಅಮೀರ್ಅಲಿ (30) ಹಾಗೂ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪನತ್ತಡಿಯ ಕೆ.ಎ. ಮುಹಮ್ಮದ್ ಉದೈಫ್ (22) ಮತ್ತು ಅವರ ಗೆಳತಿ ಈ ಆಕ್ರಮಣಕ್ಕೆ ಒಳಗಾದವರಾಗಿದ್ದಾರೆ.

ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪದ ವಸತಿಗೃಹದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಗಳು ಮುಹಮ್ಮದ್ ಉದೈಫ್ಗೆ ಬೆದರಿಸಿ, ಯುವತಿಯ ಕಿವಿಯಲ್ಲಿದ್ದ ಆಭರಣ ಹಾಗೂ ಎಟಿಎಂ ಕಾರ್ಡ್ ಬಳಸಿ 10,000 ರೂ. ನಗದನ್ನು ಅಪಹರಿಸಿರುವುದಾಗಿ ದೂರಿನಲ್ಲಿ ದಾಖಲಾಗಿದೆ.

