ಲೈಂಗಿಕ ಕಿರುಕುಳ ಆರೋಪ: ಸಿಪಿಎಂ ನಾಯಕ ರಾಜೀನಾಮೆಗೆ ಒತ್ತಾಯಿಸಿ ಯುಡಿಎಫ್ ಪ್ರತಿಭಟನೆ

ಮಂಜೇಶ್ವರ: ಮಹಿಳೆಯೊಬ್ಬರನ್ನು ಬೆದರಿಸಿ ದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪವನ್ನು ಎದುರಿಸುತ್ತಿರುವ ಸಿಪಿಎಂ ನಾಯಕ, ಎಣ್ಮಕಜೆ ಗ್ರಾ. ಪಂ ಸದಸ್ಯ ಸುಧಾಕರ ಮಾಸ್ತರ್ ತನ್ನ ಪಂಚಾಯತ್ ಸದಸ್ಯತ್ವ ಕ್ಕೆ ತಕ್ಷಣವೇ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿ ಯುಡಿಎಫ್ ಎಣ್ಮಕಜೆ ಪಂಚಾಯತ್ ಘಟಕದ ನೇತೃತ್ವದಲ್ಲಿ ಎಣ್ಮಕಜೆ ಪಂ. ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಡಿ. ಸಿ. ಸಿ ಪ್ರಧಾನ ಕಾರ್ಯದರ್ಶಿ, ಜಿ ಪಂ. ಸದಸ್ಯ ಸೋಮಶೇಖ‌ರ್ ಜೆ ಎಸ್ ಪ್ರತಿಭಟನಾ ಧರಣಿಗೆ ಚಾಲನೆ ನೀಡಿ ಮಾತನಾಡಿ ಅಧ್ಯಾಪಕ ಹುದ್ದೆಗೆ ಹಾಗೂ ಜನಪ್ರತಿನಿಧಿ ಸ್ಥಾನಕ್ಕೆ ಕಳಂಕ ತಂದ, ಮಹಿಳೆಗೆ ಕಿರುಕುಳ ನೀಡಿದ ವ್ಯಕ್ತಿ ಗ್ರಾ. ಪಂ. ಸದಸ್ಯನಾಗಿ ಮುಂದುವರಿಯುವುದು ಇಡೀ ಪಂಚಾಯತಿನ ಪಾಲಿಗೆ ಅವಮಾನಕರ. ನೈತಿಕ ಹೊಣೆ ಹೊತ್ತು ಗ್ರಾ. ಪಂ. ಸದಸ್ಯಕ್ಕೆ ರಾಜೀನಾಮೆ ಸಲ್ಲಿಸಲೇಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ನೇತಾರರು ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!