ಮಂಜೇಶ್ವರ: ಶ್ರೀ ಧೂಮವತಿ ಬಂಟ ದೈವಸ್ಥಾನ ಉದ್ಯಾವರ ಮಂಜೇಶ್ವರ ಇದರ ಫೆಬ್ರವರಿ 21-2026ರಂದು ನಡೆಯುವ ವಾರ್ಷಿಕೋತ್ಸವದ ಜಾತ್ರೆ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ದೈವಸ್ಥಾನ ಅಧ್ಯಕ್ಷ ವಿಜಯ ಕುಮಾರ್ ಉಳ್ಳಾಲ್ ವಹಿಸಿದ್ದರು. ಗೌರವ ಅಧ್ಯಕ್ಷ ವಿಶ್ವನಾಥ್ ಉಚ್ಚಿಲ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು ಕಾರ್ಯಕ್ರಮದಲ್ಲಿ ದೈವಸ್ಥಾನ ಗುರಿಕಾರರಾದ ನಾರಾಯಣ ಗುರಿಕಾರ.ಉಪಾಧ್ಯಕ್ಷಪದ್ಮನಾಭ ಪೊಯ್ಯೇ. ಮಾದವ ಉದ್ಯಾವರ. ಖಜಾಂಚಿ ವಸಂತ ಉಚ್ಚಿಲ್. ಕನಿಲ ಶ್ರೀ ಭಗವತಿ ಕ್ಷೇತ್ರದ ಪುನರ್ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು. ರಾಘವ. ಸೀತಾರಾಮ ಮಜಿಬೈಲ್. ವೇದಾವತಿ ಸೋಮೇಶ್ವರ.ಮುಂತಾದವರು ಭಾಗವಹಿಸಿದರು.