‘ಬಿನ್ನವತ್ತಳೆ’ ಪುನರ್ಮುದ್ರಣಕ್ಕೆ ಚಾಲನೆ: ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಶಿವರಾಮ ಕಾಸರಗೋಡು ಸಂಕಲ್ಪ

1997ರಲ್ಲಿ ಪ್ರಕಟಗೊಂಡ ರಾಮಕ್ಷತ್ರಿಯ ಸಮಾಜದ ಪ್ರಕಟಿತ ಬರಹಗಳನ್ನೊಳಗೊಂಡ ಸಂಪಾದಿತ ಕೃತಿ “ಬಿನ್ನವತ್ತಳೆ” ಹಾಗೂ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸದ ಡೈರೆಕ್ಟರಿ – 2026 ಪುನರ್ ಮುದ್ರಣಕ್ಕೆ ರೂ 10ಲಕ್ಷ ವೆಚ್ಚ- ಸಂಘ ಸಂಸ್ಥೆಗಳು, ಬಂಧು ಮಿತ್ರರು, ದಾನಿಗಳ ನೆರವು. ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಶಿವರಾಮ ಕಾಸರಗೋಡು ಸಮಾನ ಮನಸ್ಕರ ತೀರ್ಮಾನ
ರಾಮಕ್ಷತ್ರಿಯ ಸಮಾಜದ ಸಾಹಿತ್ಯ,ಸಾಂಸ್ಕೃತಿಕ ಮತ್ತು ಇತಿಹಾಸದ ಚಾರಿತ್ರಿಕ ಹಿನ್ನೆಲೆಯ ಕುರಿತು ಮಹತ್ವದ ದಾಖಲೆಗಳನ್ನೊಳಗೊಂಡ ಸಂಪಾದಿತ ಕೃತಿಯಲ್ಲಿ ಸರಕಾರದ ದಾಖಲೆ ಪತ್ರಗಳು, ಸಂಶೋಧನಾ ಲೇಖನಗಳು, ರಾಮಕ್ಷತ್ರಿಯ ಸಮುದಾಯದ ಬಗ್ಗೆ ಜನಾಂಗೀಯ ಅಧ್ಯಯನ ಬರಹ,ಸಾಹಿತ್ಯವನ್ನೊಳ ಗೊಂಡು 1997ರ ವರೆಗಿನ ವಿವಿಧ ಪ್ರಕಟಣಾ ಕೃತಿಗಳ ಸಮಗ್ರ ಬರಹಗಳನ್ನು ಸಂಪಾದಿಸಿರುವ “ಬಿನ್ನವತ್ತಳೆ” ಕೃತಿಯು ಶಿವರಾಮ ಕಾಸರಗೋಡು ಸಂಪಾದಕತ್ವದಲ್ಲಿ 1997 ನವಂಬರ್ 9 ರಂದು ಬಿಡುಗಡೆಗೊಂಡಿತ್ತು. ಈ ಬಿನ್ನವತ್ತಳೆ ಸಂಪಾದಿತ ಕೃತಿಯ ಪ್ರಕಟಣಾ ಖರ್ಚು ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ಮುದ್ರಣವನ್ನು ಕೈಗೊಳ್ಳಲಾಗಿದೆ.


ರಾಮಕ್ಷತ್ರಿಯ ಸಮಾಜದ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ನಡುವಣ ಸಂಪರ್ಕ ಸಂವಹನಕ್ಕೆ ಮಾತ್ರವಲ್ಲದೇ, ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ಸೇವೆ ಸಲ್ಲಿಸುತ್ತಿರುವವರ ಸಹಯೋಗ,ಸಹಕಾರ ಸಮನ್ವಯ ಸಾದಿಸಲು 2026 ಅಕ್ಟೋಬರ್/ ನವಂಬರ್ ತಿಂಗಳಲ್ಲಿ ದುಬೈ,ಶಾರ್ಜಾ, ಕುವೈಟ್ ಹಾಗೂ ಕೇರಳ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಅಲ್ಲಿನ ಸಮಾಜ ಸೇವಾ ಸಂಘಟನೆಗಳು ದಾನಿಗಳು ಪೋಷಕರು ಉದ್ಯಮಿಗಳ ನೆರವಿನಿಂದ ಬಿನ್ನವತ್ತಳೆ ಕೃತಿ ಮತ್ತು ವಿಳಾಸದ ಡೈರೆಕ್ಟರಿಯ ಕುರಿತು ಪ್ರಕಟಣಾ ವೆಚ್ಚದ ಧನ ಸಂಗ್ರಹದ ಬಗ್ಗೆ ಹಾಗೂ ಈ ಎರಡು ಕೃತಿಗಳ ಬಿಡುಗಡೆಗೆ ಆಯಾಯಾ ಪ್ರದೇಶಗಳಲ್ಲಿ ಸ್ಥಳ ಮತ್ತು ದಿನಾಂಕವನ್ನು ನಿಗದಿ ಪಡಿಸಲು ದುಂಡು ಮೇಜಿನ ಪರಿಷತ್ತು ಸಭೆಯನ್ನು ಕರೆಯಲಾಗುದು. ಎಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಸರ್ವಜನರ ಸಹಕಾರವನ್ನು ವಿನಂತಿಸಿಕೊಂಡಿದ್ದಾರೆ.ಈ ಪ್ರಕಟಣಾ ಯೋಜನೆಯಿಂದ ಉಳಿಕೆಯಾದ ಹಣದಿಂದ ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಇದರ ನಿರ್ಮಾಣದ ಕಾರ್ಯ ಯೋಜನೆಗಳಿಗೆ ವಿನಿಯೋಗಿಸಲಾಗುವುದು.


ಶಿವರಾಮ ಕಾಸರಗೋಡು ಸಂಪಾದ ಕತ್ವದಲ್ಲಿ 1997,1998,2004 ರಲ್ಲಿ ವಿಳಾಸದ ಡೈರೆಕ್ಟರಿಯ ಮೂರು ಆವೃತ್ತಿಯಾಗಿ ಪ್ರಕಟಗೊಂಡಿದ್ದು, ಇದೀಗ 4 ನೇ ಆವೃತ್ತಿಯಾಗಿ ಪ್ರಕಟವಾಗುವ ರಾಮಕ್ಷತ್ರಿಯ ಕುಟುಂಬ ದೇವಸ್ಥಾನ,ಕುಲದೇವರು ಮತ್ತು ಸಂಘಟನೆಗಳ ವಿಳಾಸದ ಡೈರೆಕ್ಟರಿ -2026 ಹಾಗೂ ಬಿನ್ನವತ್ತಳೆ ಪರಿಸ್ಕೃತ ಆವೃತ್ತಿಯು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.


ಸಮಾಜದ ಅಭಿವೃದ್ಧಿಯಾಗಬೇಕಾದರೆ ಪ್ರಧಾನವಾಗಿ ನಾವು ಆರಾಧಿಸಿಕೊಂಡು ಬರುತ್ತಿರುವ ಕುಟುಂಬ ದೇವಸ್ಥಾನ,ಕುಲದೇವರ ಮನೆಗಳ ಪುನರುಸ್ಥಾನವಾಗಬೇಕು. ಇದಕ್ಕಾಗಿ ಶ್ರದ್ದೆ,ಭಕ್ತಿಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜವು ಉತ್ತುಂಗ ಸ್ಥಿತಿಗೆ ಬರುತ್ತದೆ.ಈ ನಿಟ್ಟಿನಲ್ಲಿ ಸಮುದಾಯ ಸೇವೆ ಮತ್ತು ಕುಟುಂಬ ದೇವಸ್ಥಾನಗಳಲ್ಲಿ ಕ್ರಿಯಾತ್ಮಕವಾಗಿ ಶ್ರದ್ದೆಯಿಂದ ತೊಡಗಿಸಿಕೊಂಡು ಸಮಾಜದ ಒಗ್ಗಟ್ಟು,ಐಕ್ಯತೆ ಹಾಗೂ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಮಾಜದ ಸಂಘಟನೆಗಳನ್ನು ಒಗ್ಗೂಡಿಸುವುದು ಮತ್ತು ಪರಸ್ಪರ ಸಂಪರ್ಕವಿರಿಸಿಕೊಳ್ಳುವ ಉದ್ದೇಶದಿಂದ ಅಂತರ ರಾಷ್ಟ್ರ,ಅಂತರರಾಜ್ಯ ಜಿಲ್ಲಾ, ತಾಲೂಕು, ಗ್ರಾಮಮಟ್ಟದಲ್ಲಿ ಕಾರ್ಯವೆಸಗುತ್ತಿರುವ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ಸಮಗ್ರ ಹೆಸರು,ವಿಳಾಸಗಳು, ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳು ಹಾಗೂ ಅನುವಂಶಿಕ ಮೊಕ್ತೇಸರರು, ಆಡಳಿತ ಮೊಕ್ತೇಸರರು, ಧರ್ಮದರ್ಶಿಗಳು, ಆಡಳಿತೆದಾರರು, ಕುಟುಂಬ ದೇವಸ್ಥಾನ,ಕುಲದೇವರ ಮನೆಯ ಮುಖ್ಯಸ್ಥರು ಅಥವಾ ಅಧ್ಯಕ್ಷ ಕಾರ್ಯದರ್ಶಿ ಕೋಶಾಧಿಕಾರಿಯ ಹೆಸರು, ಮನೆ ಮತ್ತು ಕಚೇರಿಯ ವಿಳಾಸ, (ಪರವೂರಿನಲ್ಲಿ ನೆಲೆಸಿದ್ದರೆ ಅವರ ಸಂಪರ್ಕ ವಿಳಾಸ,ವಾಟ್ಸ್ ಪ್, ಮೊಬೈಲ್, ಇ-ಮೇಲ್ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ. ಸಮಸ್ತ ರಾಮಕ್ಷತ್ರಿಯ ಸಮಾಜದವರು ಈ ಮಾಹಿತಿಯನ್ನು ತಮ್ಮ ವಾಟ್ಸಪ್ ನಲ್ಲಿ ಫಾರ್ವರ್ಡ್ ಮಾಡಿ ಪ್ರೋತ್ಸಾಹಿಸಿರಿ.)


ರಾಮಕ್ಷತ್ರಿಯ ಸಮಾಜದ ಕುಟುಂಬ ದೇವಸ್ಥಾನಗಳು, ಕುಲದೇವರು ಮತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ಸಮಾಜದ ಆರ್ಥಿಕ,ಸಾಮಾಜಿಕ, ರಾಜಕೀಯ, ಧಾರ್ಮಿಕ, ಶಿಕ್ಷಣ,ಉದ್ಯಮ ವ್ಯವಹಾರ, ಸಹಕಾರ ಸೇವೆ, ಸರಕಾರ ಸೇವೆ, ಸಾಹಿತ್ಯ, ಸಾಂಸ್ಕೃತಿಕ,ಮಾಧ್ಯಮ ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿರುವ ಮಹನೀಯರೊಂದಿಗೆ ಚಿಂತನಾ ಮಂಥನ ನಡೆಸುವ ಉದ್ದೇಶದಿಂದ ಸಮಾನ ಮನಸ್ಕರ ಒಗ್ಗೂಡುವಿಕೆಯಿಂದ ರಾಮಕ್ಷತ್ರಿಯ ಇತಿಹಾಸ, ಮ್ಯೂಸಿಯಂನ್ನು ಸ್ಥಾಪಿಸಲಾಗುವುದು. ರಾಮಕ್ಷತ್ರಿಯ ಇತಿಹಾಸ ಸoಸ್ಕೃತಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳು, ಮುದ್ರಣ ಕೃತಿಗಳು,ಸ್ಮರಣ ಸಂಚಿಕೆ, ಸಮಗ್ರ ಕೃತಿ ಸಂಪುಟಗಳು, ವಿವಿಧ ಲೇಖಕರು, ಬರಹಗಾರರ ಪ್ರಕಟಿಸಿದ ಕೃತಿಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗುವುದು. ಈ ಎಲ್ಲಾ ಪ್ರಮುಖ ದಾಖಲೆ ಪತ್ರಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ನಮ್ಮ ತಲೆಮಾರಿನ ಹಿರಿಯರ ಮನೆಗಳಲ್ಲಿರುವ ರಾಮಕ್ಷತ್ರಿಯ ಸಮಾಜದ ಸಂಸ್ಕೃತಿ ಸಂಪ್ರದಾಯಗಳ ಹಾಡುಗಳು ಮತ್ತು ವಿವಿಧ ಹಳೆ ತಲೆಮಾರಿನವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ “ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ” ನಲ್ಲಿ ಸಂಗ್ರಹಿಸಿಡಲು ಉದ್ದೇಶಿಸಲಾಗಿದೆ.


ತಮ್ಮ ಸಲಹೆ ಸೂಚನೆ ಮಾರ್ಗದರ್ಶನ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನೀಡಿ ಪ್ರೋತ್ಸಾಹಿಸಲು ಅವಕಾಶವಿರುತ್ತದೆ.
ಸಂಪರ್ಕ :- ಶಿವರಾಮ ಕಾಸರಗೋಡು (ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ,)ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಪಾರೆಕಟ್ಟೆ,ಕನ್ನಡ ಗ್ರಾಮ ರಸ್ತೆ
ಕಾಸರಗೋಡು -671121 ಮೊಬೈಲ್ -9448572016
ಗೂಗಲ್ ಪೇ ಮೂಲಕ ಧನ ಸಹಾಯ ನೀಡುವವರು ಮೊಬೈಲ್ ಸಂಖ್ಯೆ 9448572016 ಇವರಿಗೆ ಕಳುಹಿಸಿ ಪ್ರೋತ್ಸಾಹಿಸಲು ವಿನಂತಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!