ಮಂಜೇಶ್ವರ: ಜನಮೈತ್ರಿ ಪೊಲೀಸ್ ಮಂಜೇಶ್ವರ ಹಾಗೂ ಕುಂಜತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ SPC ಕ್ಯಾಡೆಟ್‌ಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ತರಗತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹೊಸಂಗಡಿಯಲ್ಲಿ ನಡೆಯಿತು .
ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ಅಪಘಾತಗಳು ಈ ನಡುವೆ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ .ವಾಹನ ಚಾಲಕರು ಮತ್ತು ಸಂಚಾರಿಗಳು ಕೆಲವೊದು ನಿಯಮವನ್ನು ಪಾಲಿಸಬೇಕಾಗುವುದು,ನಿಯಮ ಮತ್ತು ಕರ್ಥವ್ಯಗಳನ್ನು ತಿಳಿಸುವ ಉದ್ದೇಶದಿಂದ
“ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು” ಎಂಬ ವಿಷಯದಡಿ ಹೊಸಂಗಡಿಯಲ್ಲಿ ಆಟೋ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಗಾಗಿ ಮಂಜೇಶ್ವರಂ ಪೊಲೀಸ್ ಠಾಣೆಯ SHO ಅಜಿತ್ ಕುಮಾರ್ ಪಿ, ಉಪ ನಿರೀಕ್ಷಕರಾದ ರತೀಶ್ ಕೆ.ಜಿ., ಉಮೇಶ್ ಕೆ.ಆರ್., ವೈಷ್ಣವ್ ರಾಮಚಂದ್ರನ್ ಅವರು ತರಗತಿ ನಡೆಸಿದರು.
ನಂತರ ASIಗಳಾದ ಸದನ್ ಮತ್ತು ರಾಜೇಶ್ ಅವರ ನೇತೃತ್ವದಲ್ಲಿ ಪಾದಚಾರಿಗಳು ಹಾಗೂ ಇತರೆ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿಸುವ ನೋಟಿಸ್‌ಗಳನ್ನು ವಿತರಿಸಲಾಯಿತು.