ಮಂಗಳೂರು:ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರವು ಡಾ ಜ್ಯೋತಿ ಕೆ ತಪಾಸಣೆಯಲ್ಲಿ ರೋಟರಿ ಕ್ಲಬ್ ಆಫ್ ಮಂಗಳೂರು ಸೌತ್ ಮತ್ತು ಮೆಡಿಲಾಬ್ ಇಂಡಿಯಾ ಫಾರ್ಮ ಬೆಂಗಳೂರು ಇವರ ಸಹಕಾರದಲ್ಲಿ ಜನವರಿ 22 ರಂದು ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯ ತನಕ ಮಂಗಳೂರಿನ ಕಾರ್ ಸ್ಟ್ರೀಟ್ ಫ್ಲವರ್ ಮಾರ್ಕೆಟ್ ರಸ್ತೆ ಯಲ್ಲಿರುವ ಲಕ್ಷ್ಮೀ ಕ್ಲಿನಿಕ್ ನಲ್ಲಿ ನಡೆಯಲಿದೆ ಎಂದು ಲಕ್ಷ್ಮೀ ಕ್ಲಿನಿಕ್ ನ ತಜ್ಞ ಆಯುರ್ವೇದ ವೈದ್ಯೆಯಾದ ಡಾ ಜ್ಯೋತಿ ಕೆ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂಳೆ ಸವಕಳಿಯನ್ನು ತಡೆಗಟ್ಟಿದರೆ ದೀರ್ಘಕಾಲದ ಮಂಡಿ ನೋವು, ಬೆನ್ನುನೋವು ಸೇರಿದಂತೆ ಹಲವು ರೀತಿಯ ಮೂಳೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಮಂಡಿ ನೋವು. ಬೆನ್ನು ನೋವು, ಸಂಧಿ ನೋವು, ನಿರಂತರ ಮೂಳೆ ಮುರಿತಗಳಿಗೆ ಕಾರಣವಾಗುವುದು ಮೂಳೆ ಸವಕಳಿಯಾಯಾಗಿದೆ ಎಂದರು .
ಈ ರೀತಿಯ ಮೂಳೆ ಸವಕಳಿ ಹಾಗೂ ಮೂಳೆ ಟೊಳ್ಳಾಗುವಿಕೆ ಯನ್ನು ಪತ್ತೆ ಹಚ್ಚಿ ದೀರ್ಘ ಕಾಲದ ಅಸ್ವಸ್ಥತೆಯನ್ನು ನಿವಾರಿಸಲು ಮೂಳೆ ಸವಕಳಿಯನ್ನು ತಡೆಗಟ್ಟುವುದು ಅತ್ಯಗತ್ಯ. ಇದಕ್ಕೆ ಸಂಬಂಧಿಸಿದ ಉಪಯುಕ್ತ ತಪಾಸಣೆ ಮತ್ತು ಮಾಹಿತಿಯನ್ನು ಒದಗಿಸಲು ವಿಶೇಷ ಶಿಬಿರ ಏರ್ಪಡಿಸಲಾಗಿದೆ. ಆರೋಗ್ಯಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಲು ತಮ್ಮ ಹೆಸರನ್ನು ಮುಂಗಡವಾಗಿ 9448168053 ದೂರವಾಣಿ ಸಂಖ್ಯೆಗೆ ನೊಂದಾಯಿಸಿಕೊಳ್ಳಬೇಕೆಂದು ಕೇಳಿಕೊಂಡರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಸಂತೋಷ್ ಶೇಟ್ , ರಾಜೇಶ್ ಶೆಟ್ಟಿ , ಭಾಸ್ಕರ್ ರೈ ಕಟ್ಟಾ ಉಪಸ್ಥಿತರಿದ್ದರು .