ಒಮಾನ್‌ನಲ್ಲಿ ದುರಂತ: ಮೂಡುಬಿದಿರೆಯ ಯುವಕ ರಾಜವರ್ಮ ಜೈನ್ ವಾಹನದ ಚಕ್ರದಡಿ ಸಾವು

ಮಂಗಳೂರು/ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೂಡಬಿದಿರೆ ಸಮೀಪದ ಸಾಣೂರು ಗ್ರಾಮದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಸಾಣೂರು ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಎಂದು ಗುರುತಿಸಲಾಗಿದೆ.

ರಾಜವರ್ಮ ಜೈನ್ ಅವರು ಒಮಾನ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕಂಪನಿಯ ವಾಹನವನ್ನು ಸಹೋದ್ಯೋಗಿಯೊಬ್ಬರು ರಿವರ್ಸ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ರಾಜವರ್ಮ ಅವರು ಆಕಸ್ಮಿಕವಾಗಿ ವಾಹನದ ಚಕ್ರದಡಿ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!