ಉಡುಪಿ ಜಿಲ್ಲಾಧಿಕಾರಿಯ ಭಗವಾಧ್ವಜ ಪ್ರಕರಣಕ್ಕೆ ತೀವ್ರ ವಿರೋಧ: ದೇವಾಲಯಗಳಲ್ಲಿ ರಾಜಕೀಯ ಪತಾಕೆ ಬೇಡ — ರಮಾನಾಥ ರೈ

ಮಂಗಳೂರು:ಉಡುಪಿ ಜಿಲ್ಲಾಧಿಕಾರಿಯವರು ಭಗವಾದ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ ಪ್ರಕರಣ ಈಗ ವಿವಾದಕ್ಕೆ ಕಾರಣವಾಗಿದೆ.ಮಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ರಮಾನಾಥ ರೈ ಅವರು ಜಿಲ್ಲಾಧಿಕಾರಿ ‌ಭಗವಾದ್ವಜ ಹಿಡಿದು ಚಾಲನೆ ನೀಡಿದುದನ್ನು ಖಂಡಿಸಿದ್ದಾರೆ .ಕೇಸರಿ ಧ್ವಜ ಹಿಡಿದುದನ್ನು ಎಲ್ಲಾ ಕಾಂಗ್ರೆಸಿಗರು ತಪ್ಪು ಅಂತ ಹೇಳಬೇಕು.ನೀವು ಯಾವುದೇ ಬಣ್ಣದ ಪತಾಕೆ ಹಾಕಬೇಡಿ.ದೇವಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ, ಕೇಸರಿ, ಹಸಿರು ಯಾವುದೇ ಪತಾಕೆ ಹಾಕಬೇಡಿ ಎಂದವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ದೇವಸ್ಥಾನದ ಕಾರ್ಯಕ್ರಮ, ಎಲ್ಲರಿಗೂ ಸಮಾನವಾದ ಕಾರ್ಯಕ್ರಮ.ಯಾವುದೇ ರಾಜಕೀಯ ಪ್ರೇರಿತ ಪತಾಕೆಯನ್ನು ಯಾರೇ ಹಾರಿಸಿದರೂ ಅದನ್ನ ನಾವು ದಿಕ್ಕರಿಸಬೇಕು ಎಂದು ರಮಾನಾಥ ರೈ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ‘ಉಪವಾಸ ಸತ್ಯಾಗ್ರಹದಲ್ಲಿ ನೀಡಿರುವ ಈ ಹೇಳಿಕೆ ಉಡುಪಿ ಜಿಲ್ಲಾಧಿಕಾರಿ ನಡೆಯನ್ನು ವಿವಾದಕ್ಕೆ ಎಳೆದಿದೆ.

ಉದ್ಯೋಗ ಖಾತರಿ (MGNREGA) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆಯ ಮರುಜಾರಿಗೆ ಆಗ್ರಹಿಸಿ ಮಂಗಳೂರು ಗಾಂಧಿ ಪ್ರತಿಪೇಯ ಎದುರು ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ವೇಳೆ ಹಿರಿಯ ನಾಯಕರಾಗಿರುವ ರಮಾನಾಥ ರೈ ಅವರ ಈ ಭಗವಾಧ್ವಜ ವಿರೋಧಿ ಹೇಳಿಕೆ ವಿಪಕ್ಷದ ಸದಸ್ಯರನ್ನು ಕೆರಳಿಸುವ ಸಾಧ್ಯತೆಗಳಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!