ಫೆಬ್ರವರಿ ಯಲ್ಲಿ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ಚಿಂತನೆ

ಫೆಬ್ರವರಿ ಯಲ್ಲಿ ಡಾ. ವಾಮನ್ ರಾವ್ ಬೇಕಲ್ ಸ್ಥಾಪಿತ “ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ” ಸ್ಥಾಪನ ದಿನ 02.02.2025.ಪ್ರಯುಕ್ತ ಪ್ರಥಮ ವಾರ್ಷಿಕೋತ್ಸವದ ಭಾಗವಾಗಿ ಮಾತೃ ಸಂಸ್ಥೆ ಕನ್ನಡ ಭವನ ಪ್ರಾಯೋಜಕತ್ವದಲ್ಲಿ “ಕಾಸರಗೋಡು ಚುಟುಕು ಸಾಹಿತ್ಯ ಸಮ್ಮೇಳನ 2026.”ಆಯೋಜಿಸುವ ಆಲೋಚನೆ ಮಾಡುತ್ತಿದೆ. ಫೆಬ್ರವರಿ ತಿಂಗಳು 15ರಿಂದ 28ರ ಒಳಗೆ ಬರುವ ಒಂದು ಬಾನುವಾರ ಸಮ್ಮೇಳನ ಆಯೋಜಿಸುವ ಬಗ್ಗೆ ಚಿಂತನ ನಡೆಯುತ್ತಿದೆ.

ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕ, ದ. ಕ. ಜಿಲ್ಲಾ ಘಟಕ, ಕೊಡಗು ಜಿಲ್ಲಾ ಘಟಕ ಸಹಯೋಗದಲ್ಲಿ, ಮತ್ತು ಕರ್ನಾಟಕ ದಲ್ಲಿ ಇರುವ ಎಲ್ಲ ಜಿಲ್ಲಾ ಘಟಕಗಳನ್ನು ಸೇರಿಸಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಮೆರವಣಿಗೆ,.. ಉದ್ಘಾಟನೆ, ಅಂತರ್ ರಾಜ್ಯ ಮಟ್ಟದ, ರಾಷ್ಟ್ರೀಯ ಮಟ್ಟದ, ಕಾಸರಗೋಡು, ಜಿಲ್ಲಾ ಮಟ್ಟದ ಪ್ರಶಸ್ತಿಗಳು,. ವಿಚಾರಗೋಷ್ಠಿ, ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ,.. ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ, ಯುವ ಕವಿಗೋಷ್ಠಿ. ಪ್ರಶಸ್ತಿ ಪ್ರದಾನ. ಸಮಾರೋಪ, ಸಮ್ಮೇಳನಾಧ್ಯಕ್ಷರೀಗೆ ಸರ್ವ ಕನ್ನಡಿಗರ ಗೌರವಾರ್ಪಣೆ. ನಡೆಸುವ ಬಗ್ಗೆ ಚಿಂತನೆ ಚರ್ಚೆ ನಡೆಯಲಿದೆ.

ಕೇಂದ್ರ ಸಮಿತಿ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅದ್ಯಕ್ಷತೆಯಲ್ಲಿ ಶೀಘ್ರದಲ್ಲಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ವಿರಾಜ್ ಅಡೂರ್, ದ. ಕ. ಜಿಲ್ಲಾಧ್ಯಕ್ಷರಾದ ಡಾ. ಕೊಲಚಪ್ಪೆ ಗೋವಿಂದ ಭಟ್, ಕೊಡಗು ಅಧ್ಯಕ್ಷರಾದ ಶ್ರೀಮತಿ ರುಬೀನ ಎಂ. ಎ. ಇವರ ನಿರ್ದೇಶನದಂತೆ ಕಾರ್ಯಸೂಚಿ ತಯಾರಾಗಲಿದೆ.”ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.”ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕೇರಳ ರಾಜ್ಯ -ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!