ಜ.28, 29: ಸಂತ ಅಲೋಶಿಯಸ್ ವಿವಿಯಲ್ಲಿ ಅಂತ‌ರ್ ರಾಷ್ಟ್ರೀಯ ಸಮ್ಮೇಳನ …. !

ಮಂಗಳೂರು,:ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹ್ಯುಮಾನಿಟೀಸ್ ವತಿ ಯಿಂದ ‘ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿ ಮತ್ತು ಸಮಾ ವೇಶಿತ ಸಮಾಜಗಳ ಉತ್ತೇಜನ’ ಎಂಬ ವಿಷಯ ದಲ್ಲಿ ಜ.28 ಮತ್ತು 29ರಂದು ಎರಡು ದಿನಗಳ ಅಂತ‌ರ್ ರಾಷ್ಟ್ರೀಯ ಸಮ್ಮೇಳನ ಆಯೋಜಿ ಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನದ ಅಧ್ಯಕ್ಷೆ ಡಾ.ರೋಸ್‌ವೀರ ಡಿಸೋಜ, ಜ.28ರಂದು ಬೆಳಗ್ಗೆ 10ಕ್ಕೆ ಎಲ್.ಎಫ್.ರಸ್ಕಿನ್ಹಾ ಸಭಾಂ ಗಣದಲ್ಲಿ ಡಿಸಿ ಎಚ್.ವಿ. ದರ್ಶನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂತ ಅಲೋಶಿಯಸ್ ವಿವಿಯ ಕುಲಾಧಿಪತಿ ರೆ.ಫಾ.ಡಯನೀಶಿಯಸ್ ವಾಝ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂತ್ರಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಸ್ಥೆಯ ಸ್ಥಾಪಕಿ ಹಾಗೂ ಅಧ್ಯಕ್ಷ, ಅಮೆರಿಕದ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ಆಪ್ರೆಸ್ಟ್‌ನ ಹಿರಿಯ ಸಂಶೋಧಕಿ ಡಾ.ಶಾಂತಿ ಎಂ. ಡಿಸೋಜ ಸಮ್ಮೇಳನದಲ್ಲಿ ದಿಕ್ಕೂಚಿ ಭಾಷಣ ಮಾಡುವರು ಎಂದರು.
ಸಮ್ಮೇಳನದಲ್ಲಿ ರಾಷ್ಟ್ರ ಮತ್ತು ಅಂತರ್‌ ರಾಷ್ಟ್ರೀಯ ಮಟ್ಟದ ವಿದ್ವಾಂಸರಾದ ಡಾ.ಕೃಷ್ಣರಾಜ್, ರೆ.ಡಾ. ಜೋಕಿಂ ಅಂದ್ರಾಡೆ, ಡಾ.ಯೂಟೆ ರಿಟ್ಸ್-ಡಾಯ್, ಡಾ.ಅಲೆಕ್ಸಾಂಡು ಬಾಲಾಸ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜ.29ರಂದು ದ.ಕ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ರಾಜು ಕೆ. ‘ಶಾಂತಿಪರ ಸಮಾಜಗಳ ಉತ್ತೇಜನಕ್ಕಾಗಿ ಸಂಸ್ಥೆಗಳ ಬಲವರ್ಧನೆ’ ವಿಷಯದಲ್ಲಿ ಮಾತನಾಡಲಿದ್ದಾರೆ ಎಂದರು. ಇತರ ಪ್ಯಾನಲ್ ಸದಸ್ಯರಾಗಿ ಲೆಪಿ, ಕೊಚ್ಚಿ ಸಂಸ್ಥೆಯ ಸಹ ನಿರ್ದೇಶಕ ರೆ.ಫಾ.ರೋಸನ್ ರಾಯ್, ಮಂಗಳೂರು ವಿವಿಯ ನಿವೃತ್ತ ರಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಜರಾಮ್ ತೋಲ್ಪಾಡಿ ಹಾಗೂ ಮಕ್ಕಳ ಮನೋವೈದ್ಯೆ ಡಾ.ರುಕ್ಸಾನಾ ಹಸನ್ ವಿವಿಧ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ತಾಂತ್ರಿಕ ಅಧಿವೇಶನಗಳು ಮತ್ತು ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ನಡೆಯಲಿದೆ ಎಂದರು.

ಅಪರಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸಿಪಿ ಗೀತಾ ಡಿ. ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಂತ ಅಲೋಶಿಯಸ್ ವಿವಿಯ ಕುಲ ಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಆಯ್ದ ಸಂಶೋಧನಾ ಪ್ರಬಂಧಗಳನ್ನು ಐಎಸ್‌ಬಿಎನ್ / ಐಎಸ್‌ಎಸ್‌ಎನ್ ಹೊಂದಿದ ಸಮ್ಮೇಳನ ಪ್ರಬಂಧ ಸಂಕಲನದಲ್ಲಿ ಪ್ರಕಟಿಸಲಾಗುತ್ತದೆ. ಕೆಲವು ಆಯ್ದ ಪ್ರಬಂಧಗಳನ್ನು ಡಿಒಐ ಹೊಂದಿದ ಪಿಯರ್ ರಿವ್ಯೂ ಜರ್ನಲ್‌ಗಳಲ್ಲಿ ಪ್ರಕಟಿಸುವ ಯೋಜನೆಯೂ ಇದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಯ ಸಹಕುಲಪತಿ ರೆ.ಡಾ.ಮೆಲ್ವಿನ್ ಡಿಕುನ್ಹಾ, ಸಂಚಾಲಕ ಆಲ್ವಿನ್ ಡಿಸೋಜ, ಸಂಘಟನಾ ಕಾರ್ಯದರ್ಶಿ ರೋಶನ್ ಮೊಂತೇರೊ, ಪಿಆರ್‌ಒ ಚಂದ್ರ ಕಲಾ, ಸಮ್ಮೇಳನದ ಸಂಯೋಜಕಿ ದೇವಿಶ್ರೀ ಶೆಟ್ಟಿ ಉಪಸ್ಥಿತರಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!