ನವದೆಹಲಿ : 77ನೇ ಗಣರಾಜ್ಯೋತ್ಸವದ ಮುನ್ನ ದಿನದಂದು ಭಾರತ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿ 2026 ಅನ್ನು ಘೋಷಿಸಿದೆ. ಸಾರ್ವಜನಿಕ ಸೇವೆ, ಕಲೆ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ ಮತ್ತು ಇನ್ನೀತರ ಅಸಾಧಾರಣ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ,ಈ ವರ್ಷದ ಪದ್ಮ ಪ್ರಶಸ್ತಿಗೆ ಕೇಂದ್ರ ಸರ್ಕಾರವು ಭಾರತದ ಉದ್ದಗಲಕ್ಕೂ ಇರುವ ವಿವಿಧ ರೀತಿಯ ಪ್ರಚಾರವಿಲ್ಲದ ವೀರರನ್ನು ಗುರುತಿಸಿದೆ. ಇವರಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳು, ಪ್ರಾಚೀನ ಬುಡಕಟ್ಟು ಜನಾಂಗದವರು ಮತ್ತು ದೂರದ ಮತ್ತು ಕಷ್ಟಕರ ಪ್ರದೇಶಗಳಿಂದ ಬಂದವರು ಸೇರಿದ್ದಾರೆ.

ಈ ವರ್ಷ 131ಮಂದಿ ಸಾಧಕರನ್ನು ಆಯ್ಕೆಮಾಡಲಾಗಿದೆ. ಗೃಹ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಐದು ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಕರ್ನಾಟಕದ ಮಂಡ್ಯ ಮೂಲದ ʼಪುಸ್ತಕ ಮನೆʼ ಗ್ರಂಥಾಲಯ ಖ್ಯಾತಿಯ ಅಂಕೇ ಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ ಡಾ|ಸುರೇಶ್ ಹನಗವಾಡಿ ಹಾಗೂ ಬೆಂಗಳೂರಿನ ಸಮಾಜ ಸೇವಕಿ ಎಸ್ಜಿ ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ರಂಜನಿ ಬಾಲಸುಬ್ರಮಣ್ಯಂ ಗೋಪಾಲ್ ಜಿ ತ್ರಿವೇದಿ ಗುಡೂರು ವೆಂಕಟ್ ರಾವ್ ಹೆಚ್.ವಿ. ಹರ್ಮನ್ಪ್ರೀತ್ ಕೌರ್ ಭುಲ್ಲರ್ ಇಂದರ್ಜಿತ್ ಸಿಂಗ್ ಸಿಧು ಜನಾರ್ದನ್ ಬಾಪುರಾವ್ ಬೋಥೆ ಜೋಗೇಶ್ ಡೇಯುರಿ ಜುಜರ್ ವಾಸಿ ಜ್ಯೋತಿಶ್ ದೇಬನಾಥ್ ಕೆ ಪಜನಿವೇಲ್ ಕೆ ರಾಮಸಾಮಿ ಕೆ ವಿಜಯ್ ಕುಮಾರ್ ಕಬೀಂದ್ರ ಪುರ್ಕಾಯಸ್ಥ (ಮರಣೋತ್ತರ) ಕೈಲಾಶ್ ಚಂದ್ರ ಪಂತ್ ಕಲಾಮಂಡಲಂ ವಿಮಲಾ ಮೆನನ್ ಕೇವಲ್ ಕ್ರಿಶನ್ ಥಕ್ರಾಲ್ ಖೇಮ್ ರಾಜ್ ಸುಂದರ್ ಕೊಳ್ಳಾಕಲ್ ದೇವಕಿ ಅಮ್ಮ ಜಿ ಕೃಷ್ಣಮೂರ್ತಿ ಬಾಲಸುಬ್ರಮಣ್ಯನ್ ಕುಮಾರ್ ಬೋಸ್ ಕುಮಾರಸ್ವಾಮಿ ತಂಗರಾಜ್ ಲಾರ್ಸ್-ಕ್ರಿಶ್ಚಿಯನ್ ಕೋಚ್ ಲಿಯುಡ್ಮಿಲಾ ವಿಕ್ಟೋರೋವ್ನಾ ಖೋಖ್ಲೋವಾ ಮಾಧವನ್ ರಂಗನಾಥನ್ ಮಾಗಂಟಿ ಮುರಳಿ ಮೋಹನ್ ಮಹೇಂದ್ರ ಕುಮಾರ್ ಮಿಶ್ರಾ ಮಹೇಂದ್ರ ನಾಥ್ ಕುಮಾರ್ ಮಂಗಲಾ ಜಂಗಾ ರೋಯ್ ಎಂ. ಕಸಂಭೈ ಮೋಹನ್ ನಗರ ನಾರಾಯಣ ವ್ಯಾಸ್ ನರೇಶ್ ಚಂದ್ರ ದೇವ್ ವರ್ಮಾ ನಿಲೇಶ್ ವಿನೋದಚಂದ್ರ ಮಂಡ್ಲೇವಾಲ ನೂರುದ್ದೀನ್ ಅಹಮದ್ ಒತ್ತುವಾರ್ ತಿರುತ್ತಣಿ ಸ್ವಾಮಿನಾಥನ್ ಪದ್ಮಾ ಗುರ್ಮೆತ್ ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ ಪೋಖಿಲ ಲೆಕ್ತೇಪಿ ಪ್ರಭಾಕರ ಬಸವಪ್ರಭು ಕೋರೆ ಪ್ರತೀಕ್ ಶರ್ಮಾ ಪ್ರವೀಣ್ ಕುಮಾರ್ ಪ್ರೇಮ್ ಲಾಲ್ ಗೌತಮ್ ಪ್ರೊಸೇನ್ ಪೂಜಿತ್ತ್ ಆರ್. (ಮರಣೋತ್ತರ) ಆರ್ವಿಎಸ್ ಮಣಿ ರಬಿಲಾಲ್ ತುಡು ರಘುಪತ್ ಸಿಂಗ್ (ಮರಣೋತ್ತರ) ರಘುವೀರ್ ತುಕಾರಾಂ ಖೇಡ್ಕರ್ ರಾಜಸ್ತಪತಿ ಕಾಳಿಯಪ್ಪ ಗೌಂಡರ್ ರಾಜೇಂದ್ರ ಪ್ರಸಾದ್ ರಾಮರೆಡ್ಡಿ ಮಾಮಿಡಿ (ಮರಣೋತ್ತರ) ರಾಮಮೂರ್ತಿ ಶ್ರೀಧರ್ ರಾಮಚಂದ್ರ ಗೋಡ್ಬೋಲೆ ಸುನೀತಾ ಗೋಡ್ಬೋಲೆ ರತಿಲಾಲ್ ಬೋರಿಸಾಗರ್ ರೋಹಿತ್ ಶರ್ಮಾ ಎಸ್.ಜಿ.ಸುಶೀಲ್ ಸಂಗ್ಯುಸಾಂಗ್ ಎಸ್ ಪೊಂಗೆನರ್ ಸಂತ ನಿರಂಜನ್ ದಾಸ್


