ಕುತ್ಯಾಳ ನವಜೀವನ ಸಮಿತಿ ಕೂಡ್ಲು ವತಿಯಿಂದ ಶ್ರಮದಾನ

ಕಾಸರಗೋಡು ಸಮೀಪದ ನಡುಹಿತ್ತಿಲು ಶ್ರೀ ರಕ್ತೇಶ್ವರಿ ದೇವಸ್ಥಾನ ಅಣಂಗೂರಿನಲ್ಲಿ ನಾಲ್ಕನೇ ವರ್ಷದ ಪುನರ್ ಪ್ರತಿಷ್ಠಾ , ವಾರ್ಷಿಕ ಮಹೋತ್ಸವ ಹಾಗೂ ಧರ್ಮನೇಮೋತ್ಸವ ಫೆಬ್ರವರಿ 6 , 7 , 8 ರಂದು ನಡೆಯಲಿದ್ದು . ಇದರ ಪೂರ್ವತಯಾರಿ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕಾಸರಗೋಡು , ನವಜೀವನ ಸಮಿತಿಯಲ್ಲಿ ಒಂದಾದ ಕುತ್ಯಾಳ ನವಜೀವನ ಸಮಿತಿ ಕೂಡ್ಲು ವತಿಯಿಂದ ಶ್ರಮದಾನ ಸೇವೆಯು ನಿನ್ನೆ ನಡೆಯಿತ್ತು .

ಈ ಸಂದರ್ಭದಲ್ಲಿ ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಹಾಗೂ ಉಳಿಯತ್ತಡ್ಕ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಜ್ಯೋತಿ ಮಾಯಿಪ್ಪಾಡಿ , ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷರು , ಪದಾಧಿಕಾರಿಗಳು , ಸದಾಸ್ಯರು , ಕುತ್ಯಾಳ ನವಜೀವನ ಸಮಿತಿಯ ಅಧ್ಯಕ್ಷರು , ಪದಾಧಿಕಾರಿಗಳು, ಸದಾಸ್ಯರು ಉಪ್ಪಸ್ಥಿತರಿದ್ದರು . ಹಾಗೂ ಶ್ರೀ ರಕ್ತೇಶ್ವರಿ ದೇವಸ್ಥಾನದ ಪದಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ ಅವರಲ್ಲಿ ಆಮಂತ್ರಣ ನೀಡಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!