ಉಡುಪಿ:ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಬೈಂದೂರಿನಲ್ಲಿ ನಡೆಯಿತು.ಕಾಲದ ಬದಲಾವಣೆಗೆ ತಕ್ಕಂತೆ ಹೈನುಗಾರಿಕೆಯನ್ನು ಮುಂದುವರಿಸಿದರೆ ಲಾಭದಾಯಕವಾಗಿಸಲು ಸಾಧ್ಯವಾಗುತ್ತದೆ.ಬೈಂದೂರು ಉತ್ಸವ ಬೈಂದೂರು ಜನರ ಜೀವನ ಕಟ್ಟಿಕೊಡುವ ಉದ್ದೇಶ ಒಳಗೊಂಡಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ, ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬೈಂದೂರು ಉತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಗೋವುಗಳ ಬಗ್ಗೆ ಪಾವಿತ್ರ್ಯತೆಯ ಭಾವನೆಯಿದ್ದು, ಕರುಗಳನ್ನು ಮಗುವಿನಂತೆ ಆರೈಕೆ ಲಾಲನೆ ಪಾಲನೆ ಮಾಡುವ ಪದ್ದತಿ ಹಿಂದಿನಿಂದಲೂ ಇದೆ. ಒಕ್ಕೂಟದ ಮೂಲಕ ಕರುಗಳ ಪ್ರದರ್ಶನ ಎರ್ಪಡಿಸಿರುವುದು ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ ಎಂದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.ನಂದಿನಿ ಉಪವ್ಯವಸ್ಥಾಪಕ ಚಂದ್ರಶೇಖರ ಭಟ್ ಮಾತನಾಡಿ, ಹೈನುಗಾರರಿಗೆ ಕೇವಲ ಹಾಲು ಉತ್ಪಾದನೆ ಮಾತ್ರ ಆದಾಯದ ಮೂಲವಲ್ಲ, ಹೆಣ್ಣು ಕರುಗಳನ್ನು ಸುಸ್ಥಿರವಾಗಿ ಸಾಕಾಣಿಕೆ ಮಾಡಿದರೆ ಮತ್ತಷ್ಟು ಲಾಭದಾಯಕವಾಗಿಸಬಹುದಾಗಿದೆ. ಹೀಗಾಗಿ ಹೈನುಗಾರರು ಹೆಣ್ಣು ಕರುಗಳ ಆರೈಕೆಗೆ ಹೆಚ್ಚಿನ ಮುತುರ್ವಜಿಸಬೇಕು ಎಂದರು.
ಮುಖ್ಯಾ ಆತಿಥಿಗಳಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ಒಕ್ಕೂಟದ ನಿರ್ದೇಶಕರಾದ ಎಮ್.ಸುಧಾಕರ ಶೆಟ್ಟಿ, ಕೆ.ಶಿವಮೂರ್ತಿ, ಮಮತಾ ಆರ್ .ಶೆಟ್ಟಿ,ಡಿ.ವಿವೇಕ್, ವ್ಯವಸ್ಥಾಪಕ ಡಾ.ರವಿರಾಜ ಉಡುಪ, ಸಮೃದ್ದ ಬೈಂದೂರು ಅಧ್ಯಕ್ಷ ಡಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ, ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಬೈಂದೂರು ಉತ್ಸವದ ಸಂಚಾಲಕ ಶ್ರೀಗಣೇಶ ಉಪ್ಪುಂದ, ಉಪ ವ್ಯವಸ್ಥಾಪಕ ಶಂಕರ ನಾಯ್ಕ, ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಮೊದಲು ಗೋಪೂಜೆ ನರವೇರಿತು. ಹಾಲು ಒಕ್ಕೂಟದ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ ,ಸಹಕಾರಿ ಹಾಲು ಒಕ್ಕೂಟದ ಬೈಂದೂರು ತಾಲೂಕು ವಿಸ್ತರಣಾಧಿಕಾರಿ ರಾಜಾರಾಮ, ನಿರ್ದೇಶಕ ಮಂಜಯ್ಯ ಶೆಟ್ಟಿ ಸಬ್ಲಾಡಿ ಪಾಲ್ಗೊಂಡಿದ್ದರು.