ವರ್ಕಾಡಿ :ವರ್ಕಾಡಿ ಬೋಳದ ಪದವಿನಲ್ಲಿ ನೆಲೆಸಿರುವ ಶ್ರೀ ಬ್ರಹ್ಮ ಮುಗೇರ ಹಾಗೂ ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯದಲ್ಲಿ ನಡೆಯಲಿರುವ ನೇಮೋತ್ಸವವು ದಿನಾಂಕ 29/03/2026ನೇ ಆದಿತ್ಯವಾರದಂದು ವಿಜೃಂಭಣೆಯಿಂದ ನಡೆಯಲಿದೆ.
ಈ ಹಿನ್ನೆಲೆ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ವರ್ಕಾಡಿ ಸಂತೋಷ್ ತಂತ್ರಿಯವರು ಕ್ಷೇತ್ರದ ವಠಾರದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ರೈ ಅಡ್ಕ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು, ಕೋಶಾಧಿಕಾರಿ ಮನೋಜ್ ಭಂಡಾರ ಮನೆ ವರ್ಕಾಡಿ, ಗೌರವ ಸಲಹೆಗಾರರಾದ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಕ್ಷೇತ್ರದ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶೀನ ಬೋಳದ ಪದವು, ಪಚ್ಚಿಲಂಪಾರೆ ಬ್ರಹ್ಮ ಮುಗೇರ ದೈವಸ್ಥಾನದ ಧರ್ಮದರ್ಶಿ ಬಾಬು ಪಚ್ಚಿಲಂಪಾರೆ, ನಿವೃತ್ತ ಶಿಕ್ಷಕ ರಾಮ ಮಾಸ್ಟರ್ ದಡ್ಡಂಗಡಿ, ಸೇವಾಸಮಿತಿ ಅಧ್ಯಕ್ಷರಾದ ಸಂಜೀವ ಬೋಳದ ಪದವು, ತನ್ನಿಮಾನಿಗ ಮಹಿಳಾ ಸಮಿತಿಯ ಅಧ್ಯಕ್ಷೆ ಲಲಿತ ಬೋಳದ ಪದವು, ಅಲ್ಲದೆ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನೇಮೋತ್ಸವದ ದಿನದಂದು ಬೆಳಿಗ್ಗೆ 9 ಗಂಟೆಗೆ ಸ್ಥಳ ಶುದ್ಧಿ ಹಾಗೂ ಚಪ್ಪರ ಮಹೂರ್ತ,
ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ,
ಸಂಜೆ 5 ಗಂಟೆಗೆ ಭಂಡಾರ ಏರಿ ಗುಳಿಗ ಕೋಲ,
ರಾತ್ರಿ 8:30ಕ್ಕೆ ಕೊರಗಜ್ಜ ಕೋಲ,
ಅನಂತರ ಅನ್ನಸಂತರ್ಪಣೆ,
ಮತ್ತು ರಾತ್ರಿ 10 ಗಂಟೆಗೆ ಬ್ರಹ್ಮ ಮುಗೇರ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಭಕ್ತಾದಿಗಳನ್ನು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿ ಹೃತ್ಪೂರ್ವಕವಾಗಿ ಆಹ್ವಾನಿಸಿದೆ.