ನವ ಚೆಲುವಿನ ಚಿಲುಮೆ ಎನ್ನರಸಿ
ಓಡೋಡಿ ಬಂದಿರುವೆ ನಾ ನಿನ್ನರಸಿ
ಈ ಮನದ ತುಂಬೆಲ್ಲಾ ತುಂಬಿರುವೆ
ನಾನೆoದಿಗೂ ನಿನ್ನ ಜೊತೆಗೆ ಇರುವೆ

ನೀನಾಡೋ ಮಾತುಗಳೆಲ್ಲ ಸುಂದರ
ನಿನ್ನ ನಗುವು ಹುಣ್ಣಿಮೆಯ ಚಂದಿರ
ನೀಬಂದು ನನ್ನ ಬದುಕು ಬಂಗಾರ
ನಿನ್ನಿಂದ ನನ್ನ ಜೀವನ ಸಿರಿ ಸಿಂಗಾರ

ಬದುಕಿನ ತಿರುಳನು ಆರಿತಿರುವೆವು
ಬಾಳಿನ ಕೊಂಡಿಯ ಬೆಸೆದಿರುವೆವು
ಜೀವನದ ಮೌಲ್ಯವ ತಿಳಿದಿರುವೆವು
ಅರಿತು ಬೆರೆತು ಸುಖದಿ ಬಾಳುವೆವು

ಹೊಂದಾಣಿಕೆಯು ಇದ್ದರೆ ಜೀವನದಿ
ಉರುಳುವುದು ದಿನಗಳು ಸಂತಸದಿ
ಮಧುರ ಕ್ಷಣದ ನೆನಪುಗಳು ಮನದಿ
ಇರಲು ಒಳಿತು ಕೊನೆಯ ಸಮಯದಿ.

ಡಾ. ವಾಣಿಶ್ರೀ ಕಾಸರಗೋಡು*
ಗಡಿನಾಡ ಕನ್ನಡತಿ

