ಕಾಂಬೋಡಿಯಾದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರ ಸಹಿತ 37 ಮಂದಿ ರಕ್ಷಣೆ…. !

ಮಂಗಳೂರು:ಉದ್ಯೋಗಕ್ಕೆಂದು ತೆರಳಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲದಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದ ಮಂಗಳೂರು ಮೂಲದ ಐವರು ಯುವಕರ ಸಹಿತ 37 ಮಂದಿಯನ್ನು ರಕ್ಷಿಸಿ ತಾಯ್ತಾಡಿಗೆ ಕರೆತರಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಉದ್ಯೋಗದ ಭರವಸೆಯೊಂದಿಗೆ ಕಾಂಬೋಡಿಯಾಗೆ ತೆರಳಿ ಕಳೆದ ಹಲವು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿದ್ದ ಜಿಲ್ಲೆಯ ಐದು ಮಂದಿ ಸೇರಿ ಒಟ್ಟು 37 ಮಂದಿ ಭಾರತೀಯರು ಕೇಂದ್ರ ಸರಕಾರದ ಸತತ ಮಧ್ಯಸ್ಥಿಕೆ ಪರಿಣಾಮ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಕ ಕಾಂಬೋಡಿಯಾದ ರಾಜತಾಂತ್ರಿಕ ಇಲಾಖೆಗಳ ಜತೆ ಸಂಪರ್ಕ ಸಾಧಿಸಿ ಯುವಕರನ್ನು ಕರೆ ತರಲು ಪ್ರಯತ್ನಿಸಲಾಗಿದೆ.


ಮಂಗಳೂರು ಮೂಲದ ಐವರು ಯುವಕರು ಕನ್ಸಲೆನ್ಸಿ ಮೂಲಕ ತಿಂಗಳಿಗೆ ಒಂದು ಲಕ್ಷ ರೂ. ಸಂಬಳದ ಡೇಟಾ ಎಂಟ್ರಿ ಕೆಲಸದ ಭರವಸೆಯೊಂದಿಗೆ ವಿದೇಶಕ್ಕೆ ತೆರಳಿದ್ದರು. ಆದರೆ ವಂಚಕರು ಅವರನ್ನು ಕಾಂಬೋಡಿಯಾಕ್ಕೆ ಕರೆದೊಯ್ದು ಸೈಬರ್‌ಅಪರಾಧ ಎಸಗುವ ಸಂಚಿಗೆ ಬಳಸಿಕೊಂಡಿದ್ದರು. ಕಾನೂನುಬಾಹಿರ ಕೆಲಸಕ್ಕೆ ಒಪ್ಪದಿದ್ದಾಗ ಯುವಕರಿಗೆ ಎಲೆಕ್ನಿಕ್ ಶಾಕ್ ಹಾಗೂ ದೈಹಿಕ-ಮಾನಸಿಕ ಹಿಂಸೆ ನೀಡಿ ಬೆದರಿಸಲಾಗುತ್ತಿತ್ತು. ಸಂತ್ರಸ್ತ ಯುವಕರು ಸಂಸದರ ಗಮನಕ್ಕೆ ಈ ವಿಚಾರವನ್ನು ತಂದಿದ್ದರು. ತತ್‌ಕ್ಷಣ ಕಾರ್ಯಪ್ರವೃತ್ತರಾದ ಕ್ಯಾ|ಬ್ರಿಜೇಶ್ ಚೌಟ ಅವರು ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಅವರ ಸತತ ಪ್ರಯತ್ನದ ಪರಿಣಾಮ ಒತೆಯಾಳು ಗಳಾಗಿ ಇದ್ದ ದೇಶದ ವಿವಿಧ ರಾಜ್ಯಗಳ ಒಟ್ಟು 37 ಯುವಕರು ತಾಯ್ಯಾಡಿಗೆ ಮರಳುವಂತಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!