ತುಕ್ಕು ಹಿಡಿದ ಪಂಜರ, ಅಶುದ್ಧ ಪರಿಸರ – ಪಿಲಿಕುಳ ಮೃಗಾಲಯದ ಮೇಲೆ ಹೈಕೋರ್ಟ್ ಅಕ್ರೋಶ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಪಿಳಿಕುಳ ನಿಸರ್ಗಧಾಮವೆಂದರೆ ಮಕ್ಕಳ ಅಚ್ಚುಮೆಚ್ಚಿನ ತಾಣ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಕರಾವಳಿಯ ಪ್ರಸಿದ್ಧ ಮೃಗಾಲಯದ ಅವ್ಯವವಸ್ಥೆ ಕಂಡು ಹೈ ಕೋರ್ಟ್ ನ್ಯಾಯಾಧೀಶರೇ ದಿಗ್ಭ್ರಮೆಗೊಂಡಿದ್ದಾರೆ.
ತಕ್ಷಣ ಬಂದ್ ಮಾಡುವುದು ಒಳಿತು ಎಂದು ಹೈಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಇದೀಗ ಅಧಿಕಾರಿಗಳ ಬೇಜಾಬ್ದಾರಿಯಿಂದ ಮಂಗಳೂರಿನ ಪಿಲಿಕುಳ ಮೃಗಾಲಯಕ್ಕೆ ಸಂಕಷ್ಟ ಶುರುವಾಗಿದೆ. ಪಿಲಿಕುಳ ಮೃಗಾಲಯದಲ್ಲಿರುವ ಪ್ರಾಣಿಗಳ ಫೋಟೋ ನೋಡಿ ಹೈಕೋರ್ಟ್ ನ್ಯಾಯಧೀಶರು ಗರಂ ಆಗಿದ್ದಾರೆ. ಉದ್ಯಾನವನದ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಹೈಕೋರ್ಟ್ ಅಕ್ರೋಶ ಹೊರಹಾಕಿದೆ.”ಪ್ರಾಣಿಗಳ ಸ್ಥಿತಿ ಹೀಗಿದ್ದರೆ ತಕ್ಷಣ ಪಾರ್ಕ್ ಬಂದ್ ಮಾಡಿ” ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ವನ್ಯಜೀವಿ ಸಂರಕ್ಷಕ ಭುವನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳ ಫೋಟೋ ನೋಡಿ ನ್ಯಾಯಪೀಠ ಅಸಮಾಧಾನಗೊಂಡಿದ್ದು ತುಕ್ಕು ಹಿಡಿದ ಪಂಜರಗಳು, ಅಶುಚಿಯಾದ ಪರಿಸರ ಹಾಗೂ ಪ್ರಾಣಿಗಳಿಗೆ ಸರಿಯಾದ ಭದ್ರತೆ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

2025ರ ಡಿಸೆಂಬರ್‌ನಲ್ಲಿ ಲೈಸೆನ್ಸ್ ಅವಧಿ ಮುಗಿದಿದ್ದು ಪರವಾನಗಿ ಇಲ್ಲದೆ ನಡೆಯುತ್ತಿದೆಯೇ ಪಿಲಿಕುಳ ಎಂಬ ಸಂಶಯ ವ್ಯಕ್ತವಾಗಿದೆ. ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸೊರಗುತ್ತಿವೆ. ಮಲೀನಗೊಂಡ ನೀರು ಕುಡಿದು ಪ್ರಾಣಿಗಳು ಅಸ್ವಸ್ಥಗೊಂಡಿರುವುದು ಕಂಡು ಬಂದಿದೆ.

ಸೆಂಟ್ರಲ್ ಜೂ ಅಥಾರಿಟಿ ಶೋಕಾಸ್ ನೋಟಿಸ್‌ ನೀಡಿದರೂ ಆಡಳಿತ ಮಂಡಳಿ ಕ್ಯಾರೆ ಎನ್ನದ ಇರುವುದು ಕೂಡ ಕಂಡುಬಂದಿದ್ದು,ಕರಾವಳಿಯ ಪ್ರಮುಖ ಪ್ರವಾಸಿ ತಾಣದ ಅವಸ್ಥೆ ಕಂಡು ಪ್ರಾಣಿ ಪ್ರೇಮಿಗಳಲ್ಲಿ ತೀವ್ರ ಆತಂಕ ಹುಟ್ಟಿಕೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!