ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಕೇಂದ್ರ ಸರ್ಕಾರದಿಂದ ರದ್ದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಬಳೆ ಆರಿಕ್ಕಾಡಿ ಟೋಲ್ ಬೂತ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಲಭಿಸಿದ್ದು, ಸಂಬಂಧಿಸಿದ ಆದೇಶ ನಾಳೆ ಲಭ್ಯವಾಗಲಿದೆ ಎಂದು ಬಿಜೆಪಿ ಮುಖಂಡರಾದ ಕೆ. ಸುರೇಂದ್ರನ್ ಹಾಗೂ ಎಂ.ಎಲ್. ಅಶ್ವಿನಿ ಅವರು ತಿಳಿಸಿದ್ದಾರೆ.

ಟೋಲ್ ಬೂತ್ ರದ್ದುಪಡಿಸಿರುವ ವಿಷಯ ತಿಳಿದ ಕೂಡಲೇ ಬಿಜೆಪಿ ಕಾರ್ಯಕರ್ತರು ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಕುಂಬಳೆಯಲ್ಲಿ ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ, ವಿಜಯೋತ್ಸವದ ಮೆರವಣಿಗೆ ನಡೆಸಿದರು.

ಈ ನಿರ್ಧಾರವು ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ದೊರೆತ ಜಯವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಲ್ಲಿ ಅತೀವ ಸಂತೋಷ ಮತ್ತು ನೆಮ್ಮದಿಯನ್ನುಂಟುಮಾಡಿದೆ. ಟೋಲ್ ಬೂತ್ ತೆರವುಗೊಳಿಸುವುದರಿಂದ ದಿನನಿತ್ಯದ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!