ಮಂಗಳೂರು:ನಗರದ ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿಯು ಕೊಟ್ಟಾರಚೌಕಿ ಜಂಕ್ಷನ್ ಬಳಿ ಇಂದು ಸ್ಥಳೀಯ ಜನಹಿತರಕ್ಷಣಾ ಸಮಿತಿಯ ವತಿಯಿಂದ ನಡೆಯಿತು .
ಜನಹಿತರಕ್ಷಣಾ ಸಮಿತಿಯ ಪ್ರಮುಖ ಹೋರಾಟಗಾರದ ವಿಜಯ್ ಕುಮಾರ್ ಸಮಿತಿಯ ಬೇಡಿಕೆಯನ್ನು ಮುಂದಿಟ್ಟು , ಮಾಲೆಮಾರ್ ಚೌಕಿ ಸರ್ವಿಸ್ ರಸ್ತೆ ನಿರ್ಮಾಣ , ಮಾಲೆಮಾರ್ – ಕುಂಟಿಕಾನ ಸರ್ವಿಸ್ ರಸ್ತೆ ನಿರ್ಮಾಣ, ಚೌಕಿಯಿಂದ ಮಾಲಾಡಿ ರಸ್ತೆ ಕಡೆ ರಸ್ತೆಯ ತಿರುವು ದಿಕ್ಕನ್ನು ಸರಾಗಪಡಿಸುವ ಬಗ್ಗೆ, ಕೊಟ್ಟಾರ ಚೌಕಿ ಜಂಕ್ಷನ್ನಲ್ಲಿ ಪ್ಲಡ್ ಲೈಟ್ ಅಳವಡಿಸುವ ಬಗ್ಗೆ. , ಕೋಡಿಕಲ್ ಕ್ರಾಸ್ ಬಳಿ ಅತಿಕ್ರಮಣ ತೆರವು ಮಾಡಿಸುವುದು. , ಕೋಡಿಕಲ್ ಕ್ರಾಸ್ ಬಳಿ ಅಪಘಾತಗಳನ್ನು ತಡೆಗಟ್ಟಲು ಕ್ರಮ ವಹಿಸುವುದು. , ಕೊಟ್ಟಾರಚೌಕಿಯಲ್ಲಿ ಸಿಗ್ನಲ್ ಲೈಟ್, ಜೀಬ್ರಾ ಕ್ರಾಸಿಂಗ್, ಬಸ್ ಬೇ, ಲೈನ್ ಅಳವಡಿಸಬೇಕೆಂದು ಸರಕಾರದ ಗಮನ ಸೆಳೆದರು .
ಕುಮಾರ್ ಮಲೆಮಾರ್ ಮಾತನಾಡಿ , ಸ್ಥಳೀಯರಾದ ನಾವುಗಳು ಹಲವಾರು ವರ್ಷಗಳಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವಿಗಳ ಮುಖಾಂತರ ಸರಕಾರ ಮತ್ತು ಇಲಾಖೆಗಳ ಗಮನಕ್ಕೆ ತಂದು ಅದನ್ನು ಸರಿಪಡಿಸಲು ಆಗ್ರಹಿಸಿದ್ದರೂ ಬೇರೆ ಬೇರೆ ಇಲಾಖೆಗಳ ಸಮನ್ವಯ ಕೊರತೆಯಿಂದ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿಲ್ಲ ಹೀಗಿರುವಾಗ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆದು ಇದಕ್ಕೆ ಶಾಶ್ವತವಾದ ಪರಿಹಾರಕ್ಕೆ ಆಗ್ರಹಿಸಲಾಗುವುದೆಂದರು .
ಪತ್ರಿಭಟನೆಯಲ್ಲಿ ಜನಹಿತರಕ್ಷಣಾ ಸಮಿತಿಯ ಸದಸ್ಯರಾದ ದಯಾನಂದ ಶೆಟ್ಟಿ , ಶಿವನ್ ಪಾಲ್ಡಡಿ ಸಹಿತ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು .