ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಲೋಕೇಶ್.ಯು ಮುಂಡಾನ್ ತ್ತಡ್ಕ ಇನ್ನಿಲ್ಲ

ಪುತ್ತಿಗೆ : ಅರ್ಧಿಕ ರಕ್ತದೊತ್ತಡದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದ ಪುತ್ತಿಗೆ ಬಳಿಯ ಮುಂಡಾನ್ ತ್ತಡ್ಕ ನಿವಾಸಿ ದಿl ರಾಮಚಂದ್ರ ಮತ್ತು ಸುಮತಿ ದಂಪತಿಗಳ ಏಕೈಕ ಪುತ್ರರಾದ ಲೋಕೇಶ್. ಯು (48) ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು . ಮೃತ ಇವರು ಶ್ರೀ ರಾಮ ಫೈನಾನ್ಸ್ ಕಂಪೆನಿಯ ಉದ್ಯೋಗದಲ್ಲಿ ತೊಡಗಿ ಕೆಲವು ವರ್ಷಗಳ ಬಳಿಕ ಡಿಸ್ಕ್ ಸಂಬಂಧಿತ ಅನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು .

ಮೃತ ಲೋಕೇಶ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರು ಹಾಗೂ ಶ್ರೀ ಅಯ್ಯಪ್ಪ ಭಜನಾ ಮಂದಿರ ಮಜೀರ್ಪಳ್ಳಕಟ್ಟೆ , ಯುವ ಕೇಸರಿ ಕಿಳಿಂಗಾರ್ , ಜೈ ಹಿಂದ್ ಮುಂಡಾನ್ ತ್ತಡ್ಕ , ಹಲವು ಸಂಘಟನೆಯಲ್ಲಿ ತೊಡಗಿದವರು . ಮೃತರ ಮನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಯಿಷಾ ಫಾತಿಮತ್ ಫಿಧಾ ಹಾಗೂ ಪಂಚಾಯತ್ ಸದಸ್ಯರು , ಹಲವು ಸಂಘಟನೆಯವರು ಬೇಟಿ ನೀಡಿದರು . ಮೃತರ ಪತ್ನಿ ಸುಶ್ಮಿತಾ , ಪುತ್ರಿ ತುಷಾರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!