ಕೇರಳ ರಾಜ್ಯದಲ್ಲಿ ವ್ಯವಸ್ಥಿತವಾಗಿ ಲವ್ ಜಿಹಾದ್ ನಡೆಯುತ್ತಿದೆ ಇದಕ್ಕೆ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ : ಹಿಂದೂ ಜಾಗರಣಾ ವೇದಿಕೆ‌ ಮುಖಂಡ ನರಸಿಂಹ ಮಾಣಿ

ಮಂಗಳೂರು:ಕೇರಳ ರಾಜ್ಯದಲ್ಲಿ ವ್ಯವಸ್ಥಿತವಾಗಿ ಲವ್ ಜಿಹಾದ್ ನಡೆಯುತ್ತಿದೆ. ಇದಕ್ಕೆ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆ‌ ಮುಖಂಡ ನರಸಿಂಹ ಮಾಣಿ ಕಿಡಿಕಾರಿದರು .ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾಸರಗೋಡಿನ ಯುವತಿ ವೈಶಾಲಿ ಅನ್ಯ ಮತದ ಯುವಕನೊಂದಿಗೆ ವಯನಾಡಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿರುವ ಮಾಹಿತಿ ಆಕೆಯ ತಂದೆಗೆ ತಿಳಿದ ಕೂಡಲೇ ಅವರು ಆಕೆ ವಾಸ್ತವ್ಯವನ್ನು ಹೂಡುತ್ತಿದ್ದ ಪಿಜೆ ಭೇಟಿನೀಡುತ್ತಾರೆ .ಅಲ್ಲಿ ಫೆ.9ರಂದು ಪಿಜಿ ಯಿಂದ ತೆರಳಿದ ವಿಡಿಯೊಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಮಗಳು ಸಂಪರ್ಕಕ್ಕೆ ಸಿಗದೆ ಇರುವುದರಿಂದ ಸುರತ್ಕಲ್‌ ಠಾಣೆಗೆ ವೈಶಾಲಿ ಪೋಷಕರು ದೂರು ನೀಡಿದ್ದಾರೆ .

ಆಗಾಗಲೇ ಬಂದ ಮಾಹಿತಿಯ ಪ್ರಕಾರ ಸುರತ್ಕಲ್ ಪೊಲೀಸರು ವಯನಾಡು ಪೊಲೀಸ್ ಠಾಣೆಗೆ ಸಂಪರ್ಕವನ್ನು ಮಾಡಿ ಯುವತಿಯ ವಿಚಾರಣೆಯನ್ನು ಮಾಡಿದಾಗ ಯುವತಿ ಅಲ್ಲಿಯೇ ಇರುವುದಾಗಿ ಮಾಹಿತಿ ಸಿಗುತ್ತದೆ .ಇದರ ಆಧಾರವಾಗಿ ಸುರತ್ಕಲ್ ಪೊಲೀಸರು ಮತ್ತು ಹೆತ್ತವರು ವಯನಾಡು ಪೊಲೀಸ್ ಠಾಣೆಗೆ ಭೇಟಿಯನ್ನು ನೀಡುತ್ತಾರೆ . ಪುತ್ರಿಯ ಜತೆ 5 ನಿಮಿಷ ಕೂಡ ಮಾತನಾಡಲು ಅವಕಾಶ ನೀಡಲಿಲ್ಲ. ಪೊಲೀಸರ ಎದುರಲ್ಲಿ ಮಗಳು ನಮ್ಮ ಜತೆ ಬರುವುದಾಗಿ ತಿಳಿಸಿದ್ದಳು. ಆದರೆ ಪೊಲೀಸರು ಮಗಳಿಗೆ ಬ್ರೈನ್ ವಾಶ್, ಬ್ಲಾಕ್ ಮೇಲ್ ಮಾಡಿ, ಬೆದರಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ತಂದೆಯೇ ಸ್ವತಃ ಹೇಳಿಕೊಂಡಿದ್ದಾರೆ .

ಈಗಾಗಲೇ ಬಂದ ಮಾಹಿತಿಯ ಪ್ರಕಾರ ವೈಶಾಲಿ ಪ್ರೀತಿಸುತ್ತಿದ್ದ ಯುವಕ ಎಸ್ ಡಿ ಪಿ ಐ ಸಂಘಟನೆಯ ಮುಖಂಡನ ಚಿನ್ನದ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕರ್ತವ್ಯವನ್ನು ಮಾಡುತ್ತಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಎಸ್ ಡಿ ಪಿ ಐ ಸಂಘಟನೆಯ ಕುಮ್ಮಕ್ಕು ಇದೆ. ಮಾತ್ರವಲ್ಲದೆ ಎಸ್ ಡಿ ಪಿ ಐ ಕೆಲವು ಮುಖಂಡರು ವಯನಾಡಿನ ಪೊಲೀಸ್ ಠಾಣೆಯಲ್ಲಿ ಯುವಕನ ಪರವಾಗಿದ್ದರು ಎಂದು ಅವರು ಹೇಳಿದರು .ಯುವತಿಯನ್ನು ಹೆತ್ತವರ ಜೊತೆಗೆ ಸೆಟಿಸುವುದಾಗಿ ಮಾಣಿ ಭರವಸೆಯನ್ನು ನೀಡಿದರು . ಈ ಕ್ಷಣದಲ್ಲಿ ಕೇರಳದಿಂದ ಹೇರಳವಾಗಿ ನಗರವನ್ನು ತಲುಪುವ ಡ್ರಗ್ಸ್ ವಿರುದ್ಧ ಕ್ರಮವನ್ನು ಕೈಕೊಳ್ಳಬೇಕ್ಕೆಂದು ಆಗ್ರಹಿಸಿದರು .

ಯುವತಿಯ ತಂದೆ ಈ ಕ್ಷಣ ಮಾತನಾಡಿ , ಕೇರಳ ಪೋಲೀಸರ ಮೇಲೆ ನಮಗೆ ನಮಗೆ ನಂಬಿಕೆ ಇಲ್ಲ ಹಾಗಾಗಿ ನಾವು ಕರ್ನಾಟಕದ ಪೋಲೀಸರ ಮೊರೆ ಹೋಗಿದ್ದೇವೆ . ಇದೊಂದು ಯೋಜಿತ ಲವ್ ಜಿಹಾದ್ ಆಗಿದೆ . ಪೊಲೀಸರ ಎದುರಲ್ಲಿ ಮಗಳು ನಮ್ಮ ಜತೆ ಬರುವುದಾಗಿ ತಿಳಿಸಿದ್ದಳು ನನ್ನ ಮಗಳಿಗೆ ಪೊಲೀಸರು ಬ್ರೈನ್ ವಾಷ್ ಮಾಡಿದ್ದಾರೆ . ಅವಳ ಜೊತೆಗೆ ಮಾತನಾಡಲು ಅವಕಾಶವನ್ನು ನೀಡಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು .ಯುವತಿಯ ತಾಯಿ ಮಾತನಾಡಿ , ಕೇರಳ ಪೋಲೀಸರ ಕ್ರಮ ಸರಿಯಲ್ಲ . ನಮ್ಮ ಜೊತೆಗೆ ಮಗಳು ಬರುವುದಾಗಿ ಹೇಳಿದ್ದಳು ಆದರೆ ಪೊಲೀಸರು ಬಿಡಲಿಲ್ಲ . ಪೊಲೀಸರ ಈ ಕ್ರಮ ಸರಿಯಲ್ಲ . ಮಗಳನ್ನು ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು .

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆ‌ ಮುಖಂಡರಾದ ಲಿಖಿತ್ ರಾಜ್ ,ಯುವತಿಯ ಹೆತ್ತವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!