ಫೆ.21ರಂದು ಕುದ್ರೋಳಿ ತೀರ್ಥಾಟನೆ ‘ ನಡಿಗೆ ದೇವರ ಕಡೆಗೆ … !

ಮಂಗಳೂರು:ನಗರದ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಟಾಪನೆ ಮಾಡಿದ ಸವಿ ನೆನಪಿಗಾಗಿ ಫೆ. 21ರಂದು ಕ್ಷೇತ್ರದ ವತಿಯಿಂದ ‘ಕುದ್ರೋಳಿ ತೀರ್ಥಾಟನೆ’ ನಡಿಗೆಯನ್ನು ಆಯೋಜಿಸಲಾಗಿದ್ದು ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಆರಂಭಗೊಳ್ಳುವ ತೀರ್ಥಾಟನೆಯು ನಗರದಲ್ಲಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ 11. 30 ಕ್ಕೆ ಶ್ರೀ ಸನ್ನಿಧಿಯನ್ನು ತಲುಪಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಜಯರಾಜ್ ಸೋಮಸುಂದರ ದೇವಾಲಯದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ನೀಡಿ , ತೀರ್ಥಾಟನೆ ನಡಿಗೆಯಲ್ಲಿ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಧಾರಣೆಯೊಂದಿಗೆ ‘ಓಂ ಶ್ರೀ ನಾರಾಯಣ ಪರಮ ಗುರುವೇ ನಮ:’ ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡೆಯಲಿರುವ ಈ ಯಾತ್ರೆಯು ಕೇವಲ ಪಾದ್ರಾ ಮಾತ್ರ ಆಗಿರದೆ ಆತ್ಮಶುದ್ಧಿಯ ಪಥ, ಸಮಾಜ ಜಾಗೃತಿಯ ಸಂಕಲ್ಪವಾಗಿರಲಿದೆ. ಪ್ರಥಮ ಬಾರಿಗೆ ನಡೆಯುತ್ತಿರುವ ಈ ತೀರ್ಥಾಟನೆಯನ್ನು ಮುಂದಿನ ವರ್ಷದಿಂದ ಜಾತ್ರೋತ್ಸವದ ಸಂದರ್ಭ ಜೋಡಣೆಗೊಂಡು ನಡೆಯಲಿದೆ. ಈ ಸಾಲಿನ ತೀರ್ಥಾಟನೆಯಲ್ಲಿ ಕನಿಷ್ಟ 10000 ಗುರು ಅನುಯಾಯಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು .ಗುರು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಈ ತೀರ್ಥಾಟನೆಯು ಕ್ಷೇತ್ರ ತಲುಪಿದ ಬಳಿಕ ಬಿಲ್ವ ಪತ್ರಾರ್ಚನೆ ಹಾಗೂ ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಕೊನೆಗೊಳ್ಳಲಿದೆ ಎಂದರು .

ಪತ್ರಿಕಾಗೋಷ್ಟಿಯಲ್ಲಿ ಕ್ಷೇತ್ರದ ಪ್ರಮುಖರಾದ ಉರ್ಮಿಳಾ ರಮೇಶ್ ಕುಮಾರ್, ದೇವೇಂದ್ರ ಪೂಜಾರಿ, ಕೃತಿನ್‌ ಧೀರಜ್‌ ಅಮೀನ್, ಕಿಶೋರ್ ಕುಮಾರ್, ಡಾ.ಬಿ.ಜಿ. ಸುವರ್ಣ, ಶೈಲೇಂದ್ರ ಸುವರ್ಣ, ಚಂದನ್ ದಾಸ್, ಗೌರವಿ ರಾಜಶೇಖರ್, ಜಯಾನಂದ್ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!