ಕಂಕನಾಡಿ ವಾರ್ಡ್‌ನಲ್ಲಿ ₹30 ಲಕ್ಷದ ಚರಂಡಿ–ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 48ನೇ ಕಂಕನಾಡಿ ವಾರ್ಡಿನ ವೆಲೆನ್ಸಿಯಾ ಸೈಮನೆ ಲೇನ್ ರಸ್ತೆಯ ಕಾನ್ವೆಂಟ್‌ನಿಂದ ಚಿತ್ತರಂಜನ್ ರವರ ಮನೆಯವರೆಗೆ 30ಲಕ್ಷ ರೂ. ವಿಶೇಷ ಅನುದಾನದಲ್ಲಿ ಮುಚ್ಚು ಚರಂಡಿ ನಿರ್ಮಾಣ ಮತ್ತು ರಸ್ತೆಯ ಅಭಿವೃದ್ಧಿ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಕಾಮಗಾರಿಯ ಬಗ್ಗೆ ಇಲ್ಲಿನ ನಿಕಟಪೂರ್ವ ಮ.ನ.ಪಾ. ಸದಸ್ಯರಾದ ಸಂದೀಪ್ ಗರೋಡಿಯವರು ವಿಶೇಷ ಪ್ರಯತ್ನ ಪಟ್ಟಿದ್ದಾರೆ. ಕಾಮಗಾರಿ ನಡೆಯುವ ವೇಳೆ ಯಾವುದೇ ಲೋಪದೋಷ ಕಂಡು ಬಂದಲ್ಲಿ ಕೂಡಲೇ ಅವರ ಗಮನಕ್ಕೆ ತನ್ನಿ. ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಕಾಮಗಾರಿ ಯಶಸ್ವಿಯಾಗಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ರಮುಖರಾದ ಚಿತ್ತರಂಜನ್, ಪ್ರಕಾಶ್ ಗರೋಡಿ, ಮನ್ವಿತ್, ಪ್ರವೀಣ್ ನಿಡ್ಡೇಲ್, ಉದಯ್ ಕುಮಾರ್, ನಾರಾಯಣ, ಜಗದೀಶ್ ಪಂಪವೆಲ್, ಯೋಗೀಶ್ ಆಚಾರ್ಯ, ರಜನೀಶ್ ಗರೋಡಿ, ವಾರ್ಡಿನ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!