ಕಾಸರಗೋಡು ಜಿಲ್ಲೆಯ ಚಿತ್ತಾರಿ ಗ್ರಾಮದಲ್ಲಿರುವ ಚಾಮುಂಡಿಕುನ್ನು ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಶಿವ ರಾತ್ರಿಯ ದಿನ ವಾರ್ಷಿಕ ಒತ್ತೆಕೋಲ ಸೇವೆಯು ನಡೆಯಿತು .ಸಾಮಾನ್ಯವಾಗಿ ಭೂತಾರಾಧನೆಯಲ್ಲಿ ಉಳಿದ ತೆಯ್ಯಮ್ ಗಳಿಗಿಂತ ಭಿನ್ನವಾಗಿ ಈ ಒತ್ತೆಕೋಲ ಆಚರಣೆ ನಡಿಯುವುದು ವಾಡಿಕೆಯಾಗಿದೆ.
ಒತ್ತೆಕೋಲದಲ್ಲಿ ಕಟ್ಟುವ ಶ್ರೀ ವಿಷ್ಣು ಮೂರ್ತಿ ದೈವವು ಅಗ್ನಿ ಪ್ರವೇಶವನ್ನು ಮಾಡುವ ಸಂದರ್ಭವನ್ನು ಕಣ್ತುಂಬಿಕೊಳ್ಳಲ್ಲು ಭಕ್ತ ಸಮೂಹವೇ ಹರಿದುಬರುತ್ತದೆ.
ಅಗ್ನಿ ಪ್ರವೇಶವನ್ನು ಮಾಡುವ ಸಮಯದಲ್ಲಿ ದೈವದ ಮುಖದಲ್ಲಿ ಆವೇಶ , ಕಣ್ಣಲ್ಲಿ ರೋಷಾಗ್ನಿಯ ಉಕ್ಕಿಹರಿದು ಅಧರ್ಮವನ್ನು ನಾಶ ಮಾಡುತ್ತೆ, ರೋಗ ಪೀಡೆಯನ್ನು ದೂರ ಮಾಡುತ್ತೆ ಎನ್ನುವ ನಂಬಿಕೆ ಭಕ್ತ ಮನಸುಗಳಲ್ಲಿ ಈಗಲೂ ಬೇರೂರಿದೆ. ನೋಡುಗರ ಕಣ್ಣಲ್ಲಿ ಭಕ್ತಿಯ ದಿವ್ಯಾನುಭೂತಿಯು ಅಲ್ಲಿ ಐಕ್ಯವಾಗುತ್ತದೆ. ವಿಷ್ಣು ಮೂರ್ತಿ ದೈವ ಉರಿಯುವ ಕೆಂಡಕ್ಕೆ ಹಾರುವ ಝಲಕ್ ಇಲ್ಲಿದೆ .
ಗಿರೀಶ್ ಪಿಎಂ
ಕಾಸರಗೋಡು