ಕುಂಜತ್ತೂರು ಪೀಸ್ ಶಾಲೆಯಲ್ಲಿ ‘ಪೀಸ್ ಕಾರ್ನಿವಲ್’ ಮೇಳ ಭರ್ಜರಿ ಯಶಸ್ಸು

ಮಂಜೇಶ್ವರ: ವಿದ್ಯಾರ್ಥಿಗಳ ಶಿಕ್ಷಣವನ್ನು ಪಠ್ಯಪುಸ್ತಕಗಳ ಮಿತಿಯಿಂದ ಹೊರತಂದು ನೈಜ ಅನುಭವಗಳ ಮೂಲಕ ಸಮೃದ್ಧಗೊಳಿಸುವ ಉದ್ದೇಶದಿಂದ ಶನಿವಾರದಂದು ಕುಂಜತ್ತೂರು ಪೀಸ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ “ಪೀಸ್ ಕಾರ್ನಿವಲ್” ಮೇಳ ಸಹಸ್ರಾರು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಶಿಸ್ತನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಸುಸೂತ್ರವಾಗಿ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು.

ವ್ಯಾಪಾರ ವಹಿವಾಟಿನ ನೈಜ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಈ ಕಾರ್ನಿವಲ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡದ್ದು ಮೇಘಾ ಮೇಳದ ವಿಶೇಷತೆಯಾಗಿತ್ತು. ಆಹಾರ ಪದಾರ್ಥಗಳು, ಆಟಿಕೆಗಳು, ಕೈಗಾರಿಕಾ ಉತ್ಪನ್ನಗಳು, ಹಸ್ತಕಲಾ ವಸ್ತುಗಳು ಸೇರಿದಂತೆ ವಿವಿಧ ವಿಧದ ಸ್ಟಾಲ್‌ಗಳು ಮೇಘಾ ಮೇಳದಲ್ಲಿ ಅತ್ಯಾಕರ್ಷಕವಾದ ದೃಶ್ಯಗಳು ಕಂಡು ಬಂತು. ವಿದ್ಯಾರ್ಥಿಗಳು ಸ್ಟಾಲ್ ನಿರ್ವಹಣೆ, ಗ್ರಾಹಕ ಸಂಪರ್ಕ, ಲೆಕ್ಕಾಚಾರ, ಮಾರಾಟ ತಂತ್ರ ಹಾಗೂ ತಂಡಕಾರ್ಯದಂತಹ ಕೌಶಲ್ಯಗಳು ಉದ್ಯಮಶೀಲ ಮನೋಭಾವ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಶಿಕ್ಷಣಾತ್ಮಕ ವೇದಿಕೆ ಎಂಬುದನ್ನು ವಿದ್ಯಾರ್ಥಿಗಳು ತೋರಿಸಿ ಕೊಟ್ಟರು.

ಶಾಲಾ ಪ್ರಾಂಶುಪಾಲ ಶ್ರೀಯುತ ಅಬ್ದುಲ್ ಖಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ನಿವಲ್ ಮೆಘಾ ಮೇಳವನ್ನು ಶಾಲಾ ಚೇಯರ್ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ ಉದ್ಘಾಟಿಸಿದರು.ಬಳಿಕ ಮಾತನಾಡಿದ (Byt 1) : ಅವರು ಈ ಮೇಳ ನಮ್ಮ ಎಲ್ಲರ ಒಗ್ಗಟ್ಟು, ಶಿಸ್ತು ಮತ್ತು ಪರಿಶ್ರಮದ ಪ್ರತಿಫಲವಾಗಿದೆ. ಇದನ್ನು ನಿರೀಕ್ಷೆಗಿಂತಲೂ ಮಿಗಿಲಾಗಿ ಯಶಸ್ವಿಗೊಳಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ ಬೆಂಗಳೂರು ಸಹಾಯಕ ಪೊಲೀಸ್ ಆಯುಕ್ತ ಟಿ ಬಶೀರ್ ಆಹ್ಮದ್ ರವರು ಮಾತನಾಡಿ (Byt 2) : ಶಾಲಾ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದ ಸಮರ್ಪಿತ ಮಾರ್ಗದರ್ಶನದಲ್ಲಿ ಶಾಂತಿ, ಸ್ನೇಹ ಮತ್ತು ಏಕತೆಯ ಸಂದೇಶದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಲ್ಲಿ ಅತೀವ ಸಂತೋಷವಿದೆ. ಎಂದು ಹೇಳಿ ಶುಭ ಹಾರೈಸಿದರು.

ಬಳಿಕ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾರ್ಥಿಗಳ ಮೇಘಾ ಮೇಳದ ರೂವಾರಿಯಂದೇ ಬಿಂಬಿಸಲ್ಪಟ್ಟ ಶಾಲಾ ಪ್ರಾಂಶುಪಾಲ ಶ್ರೀಯುತ ಅಬ್ದುಲ್ ಖಾದರ್ ರವರು ಮಾತನಾಡಿ (byt 3) : ಮೇಳದ ಯಶಸ್ಸಿಗೆ ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ಸಮರ್ಪಣೆ ಹಾಗೂ ಪೋಷಕರ ಸಹಕಾರವೇ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟ ಅವರು ಕಾರ್ನಿವಲ್ ಕೇವಲ ವ್ಯಾಪಾರ ಮೇಳವಲ್ಲದೆ ಜೊತೆಗೆ ಪೋಷಕರು, ಸ್ಥಳೀಯರು ಮತ್ತು ಅತಿಥಿಗಳಿಗೆ ಮನರಂಜನೆ ಹಾಗೂ ಖರೀದಿಯ ಅನುಭವ ಒದಗಿಸುವ ಉತ್ಸವವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯ ಇಲ್ಯಾಸ್ ತೂಮಿನಾಡು, ಉದ್ಯಮಿ ಅಲಿ ಕುಟ್ಟಿ ಹಾಜಿ, ಆಹ್ಮದ್ ಮಾಸ್ಟರ್, ಹನೀಫ್ ಶಾರ್ಜಾ, ಡಾಕ್ಟರ್ ಮೊಹಮ್ಮದ್ ರಮೀಝ್, ನೂರ್ ಜಹಾನ್ ಸ್ವಲಾಹಿಯ, ಮಹಮ್ಮದ್ ಹುಸೈನ್, ಇಸ್ಮಾಯಿಲ್ ಪಾಂಡ್ಯಾಲ್, ಮೊಹಮ್ಮದ್ ಹಾಜಿ ಸೇರಿದಂತೆ ಹಲವು ಗಣ್ಯರುಗಳು ಅತಿಥಿಗಳಾಗಿ ಪಾಲ್ಗೊಂಡರು.ಈ ಸಂದರ್ಭ ವೇದಿಕೆಯಲ್ಲಿ ಎಸ್‌ಕೆಜಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭ, ಹೃದಯಸ್ಪರ್ಶಿ ಆಚ್ಚರಿ ಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಾಟೆ ಅಭ್ಯಾಸ ಸೇರಿದಂತೆ ವಿವಿಧ ಮನರಂಜನೆಗಳು ನಡೆಯಿತು.

ಮತ್ತೊಂದೆಡೆ ಸಾಂಪ್ರದಾಯಿಕ ಆಟಗಳು, ಆಟದ ಮೈದಾನ ಉಪಕರಣಗಳೊಂದಿಗೆ ಪ್ಲೇ ಝೋನ್ ವಿಜ್ಞಾನ ಯೋಜನೆಗಳ ಪ್ರದರ್ಶನ, ರೇಸರ್ ಶೋ,ಅರಬಿಕ್ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಪರಂಪರೆ ಪ್ರದರ್ಶನಗಳು ನಡೆಯಿತು.ಮೇಘಾ ಮೇಳದಲ್ಲಿ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರುಗಳು ಹಾಗೂ ಸ್ಥಳೀಯ ಹಿತೈಷಿಗಳು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!