ಮಂಜೇಶ್ವರ: ರಾ. ಹೆದ್ದಾರಿಯಲ್ಲಿ ಸರಣಿ ಅಪಘಾತ – ಸುಳ್ಯ ಯುವಕ ಮೃತ್ಯು, ಮತ್ತೋರ್ವ ಮಂಗಳೂರು ಆಸ್ಪತ್ರೆಗೆ ದಾಖಲು

ಮಂಜೇಶ್ವರ: ರಾ. ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವ ಸಾವನ್ನಪ್ಪಿ ಜೊತೆಗಿದ್ದವನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ದ. ಕ. ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಏನೆಕಲ್ಲು ನಿವಾಸಿ ಸುರೇಶ್ ರೈ ಎಂಬವರ ಪುತ್ರ ನಿರಂಜನ್ ಕೆ. (24) ಸಾವನ್ನಪ್ಪಿದ ದುರ್ದೈವಿ. ಮಂಗಳೂರು ಶಕ್ತಿನಗರ ನೀತಿನಗರದ ಬೆನ್ನಿ ಎಂ.ಜೆ. ಎಂಬವರ ಪುತ್ರ ಕೃತಿಕ್ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬುಧವಾರ ಮುಂಜಾನೆ 12.40ರ ವೇಳೆ ಅಪಘಾತ ಸಂಭವಿಸಿತ್ತು. ಪಿಕಪ್ ಹಾಗೂ ಎರಡು ಬೈಕ್‌ಗಳು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಪ್ರವಾಸಕ್ಕಾಗಿ ಬಂದವರು ಐದು ಬೈಕ್‌ಗಳಲ್ಲಿ ಮರಳುತ್ತಿದ್ದರು. ಈ ಸಂದರ್ಭ ಎರಡು ಬೈಕ್‌ಗಳು ಪಿಕಪ್‌ಗೆ ಢಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.ಗಂಭೀರ ಗಾಯಗೊಂಡಿದ್ದ ನಿರಂಜನ್ ಹಾಗೂ ಕೃತಿಕ್ ಬೆನ್ನಿ ಅಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಿದರೂ ನಿರಂಜನ್‌ರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಚಾಲನೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!