ಮಂಗಳೂರು:ಬಿ ಎಂ ರೋಹಿಣಿ ಅಭಿನಂದನಾ ಸಮಿತಿ ಮಂಗಳೂರು ಮತ್ತು ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ ವತಿಯಿಂದ ಫೆ 21 ರಂದು ಬಿ. ಎಂ. ರೋಹಿಣಿ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಪೂರ್ವಾಹ್ನ ಹತ್ತರಿಂದ ನಡೆಯಲಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಏಪ್ರಿಲ್ 6 , 1944 ರಂದು ಹುಟ್ಟಿದ ರೋಹಿಣಿಯವರಿಗೆ ಈಗ 82ರ ಹರೆಯ. ಇಂದಿಗೂ ದಣಿವು ಎಂಬ ಪದವನ್ನು ನಾಚಿಸುವಂತೆ ಅವರು ಕ್ರಿಯಾಶೀಲರಾಗಿದ್ದಾರೆ.ಈಗಾಗಲು ಸಾಹಿತ್ಯ ಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದಾರೆ ಎಂದರು .ಬಿ. ಎಂ. ರೋಹಿಣಿಯವರು ಬರೆದ ಸುಮಾರು 23 ಕೃತಿಗಳಲ್ಲಿ ಕತೆಗಳು, ಅನುಭವ ಕಥನಗಳು, ಮಹಿಳಾ ಚಿಂತನೆ, ಸಂಶೋಧನೆ, ವೈಚಾರಿಕ ಲೇಖನಗಳು ಇವೇ ಅಲ್ಲದೆ, ವಿವಿಧ ಸಂಘ ಸಂಸ್ಥೆಗಳಿಗಾಗಿ 4 ಸಂಪಾದಿತ ಕೃತಿಗಳನ್ನು, 10 ಸಹಸಂಪಾದನೆಯ ಕೃತಿಗಳಿಗೆ ದುಡಿದು ತಮ್ಮ ಅವಿರತ ಶ್ರಮಕ್ಕೆ ಸಾಕ್ಷಿಯಾದವರು ಎಂದರು .
ಇಂತಹ ರೋಹಿಣಿ ಅವರು ಏಪ್ರಿಲ್ 6, 2026 ಕ್ಕೆ 82 ತುಂಬಿ 83ಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಸಂಘ ಸಂಸ್ಥೆಗಳವರು ಒಗ್ಗೂಡಿ ಸನ್ಮಾನಿಸಲು ತೀರ್ಮಾನಿಸಿದೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಮರ್ಲಿನ್ ಮಾರ್ಟಿಸ್ , ಜ್ಯೋತಿ ಚೇಳಾಯ್ರು , ಸುಮಲತಾ ಸುವರ್ಣ , ದೇವಿಕಾ ನಾಗೇಶ್ ಸಹಿತ ಮುಂತಾದವರು ಉಪಸ್ಥಿತರಿದ್ದರು .