ಕೋಸ್ಮೋಪೊಲಿಟನ್ ಕ್ಲಬ್ ವತಿಯಿಂದ ಆಹ್ವಾನಿತ ರಾಜ್ಯ ಮಟ್ಟದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ 2026 … !

ಮಂಗಳೂರು: ಕೋಸ್ಮೋಪೊಲಿಟನ್ ಕ್ಲಬ್ ವತಿಯಿಂದ ಫೆ 20 ರಿಂದ ಮಾರ್ಚ್ 1 ರ ತನಕ ರಾಜ್ಯ ಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಶಿಪ್ 2026 ಸ್ಪರ್ಧೆಯು ನಗರದ ಬಾವುಟಗುಡ್ಡೆಯಲ್ಲಿರುವ ಕೋಸ್ಮೋಪೊಲಿಟನ್ ಕ್ಲಬ್ ಒಳ ಕ್ರೀಡಾಂಗಣದಲ್ಲಿ ಪ್ರಥಮವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದ್ದು ಈ ಸ್ಪರ್ಧೆಯಲ್ಲಿ ಪ್ರತಿಷ್ಠಿತ 14 ಮಂದಿ ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ಟೂರ್ನಮೆಂಟ್ ಛೇರ್‌ಮೆನ್ ರಾಜಗೋಪಾಲ ರೈ ತಿಳಿಸಿದರು .

ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಂಸ್ಥೆಯು ಈಗಾಗಲೇ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿಕೊಂಡು ಸಾಗುತ್ತಿದೆ . ಪಂದ್ಯಕೂಟವನ್ನು ದ. ಕ. ಜಿಲ್ಲಾಧಿಕಾರಿಯವರಾದ ದರ್ಶನ್ ಎಚ್. ವಿ. ಇವರು ಉದ್ಘಾಟಿಸಲಿದ್ದಾರೆ , ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎ.ಸದಾನಂದ ಶೆಟ್ಟಿಯವರು ವಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಕಾರ್ಯದರ್ಶಿಗಳಾದ ಎಂ ಸಿ ಯೋಗೀಶ್ ಸದಸ್ಯರಾದ ದೇವಿಚರಣ್ ಶೆಟ್ಟಿ, ನಾರಾಯಣ ಶೆಟ್ಟಿ, ಮನೋಜ್ ಕುಮಾರ್, ಪ್ರಸಾದ್ ರೈ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!