ಉಪ್ಪಳದಲ್ಲಿ ಯುವತಿ ನೇಣು ಬಿಗಿದು ಆತ್ಮಹತ್ಯೆ; ತನಿಖೆ ಆರಂಭ

ಮಂಜೇಶ್ವರ: ಉಪ್ಪಳದ ಪ್ಲಾಟಿನಲ್ಲಿ ವಾಸಿಸುವ ಅಫೀನಾ ಬಾನು (28) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಬುಧವಾರ ರಾತ್ರಿ ಈ ದುರಂತ ಸಂಭವಿಸಿದೆ. ಅಫೀನಾ ಅವರ ಪತಿ ಮುಹಮ್ಮದ್ ತನ್ಸಿಲ್ ನಮಾಜ್‌ಗಾಗಿ ಮಸೀದಿಗೆ ತೆರಳಿದ್ದ ಸಮಯದಲ್ಲಿ, ಅಫೀನಾ ತಮ್ಮ ಮಲಗುವ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಮಸೀದಿಯಿಂದ ಹಿಂತಿರುಗಿದಾಗ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

​ ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆಯ ಸಹೋದರ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!